ಕಾರ್ಕಳ: ಐತಿಹಾಸಿಕ ಹಾಗೂ ಅತ್ಯಂತ ಪುರಾತನ ಕಾರಣೀಕ ಕ್ಷೇತ್ರವಾಗಿರುವ ಕಾರ್ಕಳ ಕೋಟೆ ಮಾರಿಯಮ್ಮ ದೇವಸ್ಥಾನದ ವಾರ್ಷಿಕ ಮಾರಿಪೂಜಾ ಮಹೋತ್ಸವವು ಮೇ 16ರಂದು ಆರಂಭವಾಗಿದೆ.
ಮಂಗಳವಾರ ಮುಂಜಾನೆ ದೇವಿಗೆ ವಿಶೇಷ ಪೂಜೆ ನೆರವೇರಿದ ಬಳಿಕ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮೂಲಕ ಮೂರು ಮಾರ್ಗದ ದೇವರ ಕಟ್ಟೆಯಲ್ಲಿ ಪ್ರತಿಷ್ಟಾಪಿಸಲಾಯಿತು.

ಭಕ್ತರು ದೇವಿಗೆ ಹಣ್ಣುಕಾಯಿ,ಹೂವು,ಬಳೆ,ನಿಂಬೆಹಣ್ಣು, ದೀಪದೆಣ್ಣೆ ಮುಂತಾದವುಗಳನ್ನು ಹರಕೆ ರೂಪದಲ್ಲಿ ಸಮರ್ಪಿಸಿ ದೇವರ ಕೃಪೆಗೆ ಪಾತ್ರರಾದರು.ಮಂಗಳವಾರ ಮುಂಜಾನೆಯಿಂದ ರಾತ್ರಿವರೆಗೂ ದೇವಿಯನ್ನು ಕಟ್ಟೆಯಲ್ಲಿ ಪೂಜಿಸಿ ಬಳಿಕ ಭವ್ಯ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಕೊಂಡೊಯ್ಯಲಾಗುತ್ತದೆ.
ಕಳೆದ ಮಾರ್ಚ್ ನಲ್ಲಿ ಸಂಪೂರ್ಣವಾಗಿ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ನಡೆದ ಬಳಿಕ ಪ್ರಥಮ ಮಾರಿಪೂಜೆ ಮಹೋತ್ಸವ ನಡೆಯುತ್ತಿದ್ದು ಸಾವಿರಾರು ಭಕ್ತಾದಿಗಳು ದೇವರ ದರ್ಶನ ಪಡೆದು ಕೃತಾರ್ಥರಾದರು.

