Share this news

ಕಾರ್ಕಳ :ಕಳೆದ 8/9 ತಿಂಗಳ ನಿರಂತರ ಹಾಗೂ ಕಠಿಣ ಪರಿಶ್ರಮ ಹಾಗೂ ದೇವಿಯ ಅನುಗ್ರಹದ ಫಲವಾಗಿ ದೇವಾಲಯದ ಜೀರ್ಣೋದ್ಧಾರ ಕೆಲಸಗಳು ಅಂತಿಮ ಹಂತ ತಲುಪಿದ್ದು ಮಾರ್ಚ್ 9ರಿಂದ ಬ್ರಹ್ಮಕಲಶೋತ್ಸವ ಸಂಭ್ರಮ ನಡೆಯಲಿದೆ ಎಂದು ಎಂದು ಇಂಧನ ಕನ್ನಡ ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಹೇಳಿದರು.

ಅವರು ಮಾ.9 ರಿಂದ ಮಾ.14 ರವರೆಗೆ ನಡೆಯಲಿರುವ ಕಾರ್ಕಳದ ಮಾರಿಯಮ್ಮ ದೇವಾಲಯದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಸುಮಾರು 19 ಕೋಟಿ ವೆಚ್ಚದಲ್ಲಿ ನಿರ್ಮಿಸಲ್ಪಟ್ಟ ದೇವಾಲಯದ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ,
ಬ್ರಹ್ಮಕಲಶೋತ್ಸವದ ವಿವಿಧ 18 ಸಮಿತಿಗಳು ಕಾರ್ಯದಕ್ಷತೆಯಿಂದ ಕಾರ್ಯನಿರ್ವಹಿಸಬೇಕು.

ಮಾ.13ರಂದು ದೇವಿಯ ಪ್ರತಿಷ್ಠೆ, 14ರಂದು ಬ್ರಹ್ಮಕಲಶಾಭಿಷೇಕವು ಶೃಂಗೇರಿ ಮಠದ ಸ್ವಾಮಿಗಳ ಉಪಸ್ಥಿತಿಯಲ್ಲಿ ನೆರವೇರಲಿದೆ ಈ ಕಾರ್ಯಕ್ರಮಗಳಿಗೆ ನಿತ್ಯ ಐವತ್ತು ಸಾವಿರ ಭಕ್ತರು ಸೇರಲಿದ್ದಾರೆ.ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಾ.5 ರಂದು ಸಾಮೂಹಿಕ ಸ್ವಚ್ಚತಾ ಕಾರ್ಯಕ್ರಮ ನಡೆಯಲಿದೆ. ಮಾ.7 ರಂದು ಸುಮಾರು 250 ವಾಹನಗಳ ಸಹಿತ ಅದ್ದೂರಿ ಹಸಿರು ಹೊರೆಕಾಣಿಕೆ ಜೊತೆ ಭಜನಾ ತಂಡಗಳ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ.ಮಾರ್ಚ್ 9 ರಿಂದ 14ರವರೆಗೆ ಮಾರಿಯಮ್ಮ ದೇವಾಲಯವನ್ನು ತರಕಾರಿ ಹಾಗೂ ವಿವಿಧ ಹಣ್ಣು ಹಂಪಲುಗಳಿಂದ ಅಲಂಕರಿಸಲಾಗುವುದು ಎಂದರು.


ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಜಗದೀಶ್ ಮಲ್ಯ, ಶ್ರೀ ರಾಂ ಭಟ್ ಸಾಣೂರು ಮಾತನಾಡಿದರು.ಇದೇವೇಳೆ ವಿವಿಧ ಸಮಿತಿಗಳಿಗೆ ಜವಾಬ್ದಾರಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ವಿಜಯಶೆಟ್ಟಿ , ನರಸಿಂಹ ಪೈ ಪಾಲಡ್ಕ ,ಭಾಸ್ಕರ್ ಕುಲಾಲ್, ನವೀನ್ ನಾಯಕ್,ಗಣೇಶ್ ಕಾಮತ್ ಉಪ ಸ್ಥಿತರಿದ್ದರು.
ನವೀನ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *