ಕಾರ್ಕಳ : ವೃತ್ತಿ ಶಿಕ್ಷಣ ತರಬೇತಿ ನೀಡುವ ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆ IIT ಬಾಂಬೆಯವರು ನಡೆಸಿದ UCEED ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಇಶಾನ್ ಪಿ ಸುಬ್ಬಾಪುರಮಠ್ 95.53 ಅಂಕ ಗಳಿಸಿ ಆಲ್ ಇಂಡಿಯಾ ರ‍್ಯಾಂಕಿAಗ್ ನಲ್ಲಿ 1919 ನೇ ಸ್ಥಾನ ಗಳಿಸಿದ್ದಾರೆ.
IIT ಯಲ್ಲಿ ಡಿಸೈನ್ಸ್ ಕೋರ್ಸ್ ನ ಪ್ರವೇಶಾತಿಗಾಗಿ ಜನವರಿ 2023 ರಲ್ಲಿ ನಡೆದ ಪರೀಕ್ಷೆಯಲ್ಲಿ ಇಶಾನ್ ಅತ್ಯುತ್ತಮ ಅಂಕಗಳಿದ್ದು, ವಿದ್ಯಾರ್ಥಿಯ ಈ ಸಾಧನೆಗೆ ಕ್ರಿಯೇಟಿವ್ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ, ಉಪನ್ಯಾಸಕ ವರ್ಗದವರು ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಲಿಶನ್ ಗೌಡ ಅಭಿನಂದನೆ ಸಲ್ಲಿಸಿದ್ದಾರೆ.