Share this news

ಕಾರ್ಕಳ: ವೈಯಕ್ತಿಕ ದ್ವೇಷವನ್ನೇ ಮುಂದಿಟ್ಟುಕೊಂಡು ಕ್ಷುಲ್ಲಕ ಕಾರಣಕ್ಕಾಗಿ ಕಾರ್ಕಳದಲ್ಲಿ ಮಹಿಳೆಯರಿಬ್ಬರು ಕಿತ್ತಾಡಿ ಬಳಿಕ ಹೊಡೆದಾಟ ಮಾಡಿಕೊಂಡ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಕಾರ್ಕಳ ಭವಾನಿ‌ಮಿಲ್ ಜಂಕ್ಷನ್ ಬಳಿಯ ನಿವಾಸಿಗಳಾದ ವಸುಧಾ ಹಾಗೂ ವಿದ್ಯಾಜ್ಯೋತಿ ಎಂಬ ಮಹಿಳೆಯರ ನಡುವೆ ಪರಸ್ಪರ ವೈಯಕ್ತಿಕ ದ್ವೇಷದಿಂದ ಕಿತ್ತಾಟ ನಡೆದಿದೆ.
ವಸುಧಾ ಎಂಬವರು ಸೋಮವಾರ ರಾತ್ರಿ8 ಗಂಟೆ ಸುಮಾರಿಗೆ ತನ್ನ ಮನೆಗೆ ನಡೆದುಕೊಂಡು ಹೋಗುವಾಗ ಆರೋಪಿಗಳಾದ ವಸಂತಿ, ಜ್ಯೋತಿ, ಪ್ರಮೋದಾ, ಶಿಲ್ಪ ಹಾಗೂ ಪ್ರಕಾಶ ಎಂಬವರು ವಸುಧಾ ಅವರನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿ ನಿಂದನೆ ಮಾಡಿದ್ದಾರೆ ಎಂದು ವಸುಧಾ ಅವರು ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ
ಈ ದೂರಿಗೆ ಪ್ರತಿಯಾಗಿ ವಿದ್ಯಾಜ್ಯೋತಿ ಎಂಬವರು ಕೂಡ ವಸುಧಾ ಅವರ ವಿರುದ್ಧ ದೂರು ನೀಡಿದ್ದು, ತನ್ನ ಗಂಡ ಹಾಗೂ ಸಹೋದರರ ಕುರಿತು ಸುಳ್ಳು ಆಪಾದನೆ ಹಾಗೂ ನಿಂದನೆ ಯಾಕೆ ಮಾಡುತ್ತೀಯಾ ಎಂದು ವಸುಧಾ ಅವರಲ್ಲಿ ಪ್ರಶ್ನಿಸಿದಾಗ, ಕೋಪಗೊಂಡ ವಸುಧಾ ಅವರು ವಿದ್ಯಾಜ್ಯೋತಿ ಮೇಲೆ ಹಲ್ಲೆ ನಡೆಸಿ ನೆಲಕ್ಕೆ ಕೆಡವಿ ಕಚ್ಚಿ ಗಾಯಗೊಳಿಸಿದ್ದು ಅಲ್ಲದೇ ಜಗಳ ಬಿಡಿಸಲು‌ ಬಂದ ತನ್ನ ಭಾವ ಪ್ರಕಾಶ್ ಎಂಬವರಿಗೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಎರಡು ದೂರುಗಳ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.
ಕ್ಷುಲ್ಲಕ ಕಾರಣಗಳಿಗಾಗಿ ಮಹಿಳೆಯರಿಬ್ಬರ ಈ ಜಡೆಜಗಳ ಹಾದಿಬೀದಿ ರಂಪ ನೆರೆದಿದ್ದ ಜನರಿಗೆ ಬಿಟ್ಟಿ ಮನರಂಜನೆ ಸಿಕ್ಕಿದ್ದು ಸುಳ್ಳಲ್ಲ.

 

 

 

 
 

 

 
 

Leave a Reply

Your email address will not be published. Required fields are marked *