ಕಾರ್ಕಳ: ಗಂಡ ಹೆಂಡತಿ ನಡುವಿನ ಭಿನ್ನಾಭಿಪ್ರಾಯವನ್ನು ರಾಜಿ ಮೂಲಕ ಬಗೆಹರಿಸಲು ಮಸೀದಿಯಲ್ಲಿ ಮಾತುಕತೆ ಮುಗಿಸಿ ಹೊರಬರುತ್ತಿದ್ದಂತೆಯೇ ಪತ್ನಿಯ ಸಂಬಂಧಿಕರರಿಬ್ಬರು ಪತಿಯ ಮೇಲೆ ಹಲ್ಲೆ ನಡೆಸಿದ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಸುಹೇಲ್ ಎಂಬವರು ಹಲ್ಲೆಗೊಳಗಾಗಿದ್ದು ಅವರ ತಂದೆ ಈ ಕುರಿತು ಇಬ್ಬರು ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ. ಹಿರ್ಗಾನ ಗ್ರಾಮದ ಸುಹೇಲ್ ರವರಿಗೆ ಬಂಗ್ಲೆಗುಡ್ಡೆ ನಿವಾಸಿ ನಿಸ್ಬಾ ಭಾನು ಜತೆ ಕಳೆದ 2022ರ ಜ.26 ರಂದು ವಿವಾಹವಾಗಿತ್ತು. ಆದರೆ ವಿವಾಹದ ನಂತರ ಗಂಡ ಹೆಂಡತಿಯವರಲ್ಲಿ ಹೊಂದಾಣಿಕೆ ಇಲ್ಲದ ಹಿನ್ನಲೆಯಲ್ಲಿ ಇವರಿಬ್ಬರು ಬೇರೆ ಬೇರೆ ವಾಸವಾಗಿದ್ದರು. ಪತಿ ಪತ್ನಿಯರ ನಡುವಿನ ಜಗಳವನ್ನು ಮಾತುಕತೆಯ ಮೂಲಕ ರಾಜಿ ಮಾಡಿಕೊಳ್ಳಲು ಬುಧವಾರ ಸಂಜೆ ಕಾರ್ಕಳದ ಜಾಮೀಯಾ ಮಸೀದಿಯಲ್ಲಿ ಎರಡು ಮನೆ ಕಡೆಯವರು ಹಾಜರಿದ್ದು ಮಾತುಕತೆ ನಡೆಸಿದ್ದು ಮಾತುಕತೆ ಮುಗಿಸಿದ ನಂತರ ರಾತ್ರಿ 08.30ರ ವೇಳೆಗೆ ಸುಹೇಲ್ ತನ್ನ ಮಗನನ್ನು ಎತ್ತಿಕೊಂಡಿರುವಾಗ ಆರೋಪಿಗಳಾದ ಅಶ್ರಫ್ ಹಾಗೂ ನಜೀರ್ ಇವರು ಸುಹೇಲ್ ಅವರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಲು ಪ್ರಯತ್ನಿಸಿದ್ದು, ಇವರ ಜಗಳ ಬಿಡಿಸಲು ಹೋಗಿದ್ದ ಸಯ್ಯದ್ ಯೂನಸ್ ಅವರಿಗೂ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ