ಕಾರ್ಕಳ: ತಾಲೂಕು ಆಡಳಿತ, ತಾ.ಪಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಾರ್ಕಳ ಪುರಸಭೆಯ ಸಹಯೋಗದಲ್ಲಿ ಪೆರ್ವಾಜೆ ಬಿಲ್ಲವ ಸಮಾಜ ಮಂದಿರದಲ್ಲಿ ಬುಧವಾರ ಗೃಹಲಕ್ಷಿö್ಮ ಯೋಜನೆಗೆ ಕಾರ್ಕಳ ತಹಸೀಲ್ದಾರ್ ಅನಂತಶAಕರ್ ಬಿ. ಚಾಲನೆ ನೀಡಿದರು.
ಬಳಿಕ ಮಾತಮಾಡಿದ ಅವರು ಮಹಿಳಾ ಸಬಲೀಕರಣದ ಉದ್ದೇಶ ಈ ಗೃಹಲಕ್ಷ್ಮಿ ಯೋಜನೆಯ ಹಿಂದಿದೆ ಎಂದರು.
ತಾ.ಪA.ಕಾರ್ಯನಿರ್ವಹಣಾಧಿಕಾರಿ ಗುರುದತ್ ಎಂ.ಎನ್. ಮಾತನಾಡಿ, ಈ ಯೋಜನೆಯ ಮಾಹಿತಿಯನ್ನು ಪ್ರತಿಯೊಬ್ಬರಿಗೂ ನೀಡಿ, ಯಶಸ್ವಿಗೊಳಿಸುವಂತೆ ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಮಾತನಾಡಿ, ಪುರಸಭಾ ವ್ಯಾಪ್ತಿಯ ಐದು ಕಡೆಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮಹಿಳೆಯರಿಂದ ಅಭೂತಪೂರ್ವ ಬೆಂಬಲ ಸಿಕ್ಕಿದೆ ಎಂದರು.
ಪುರಸಭಾ ಸದಸ್ಯ ಶುಭದ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಕಳ ತಾಲೂಕಿನಲ್ಲಿ 28 ಸಾವಿರ ಮಹಿಳೆಯರು ಗೃಹಜ್ಯೋತಿ ಯೋಜನೆಯಡಿ ಹೆಸರು ನೊಂದಾಯಿಸಿದ್ದಾರೆ. ಪುರಸಭಾ ವ್ಯಾಪ್ತಿಯಲ್ಲಿ 4 ಸಾವಿರ ಮಹಿಳೆಯರು ಹೆಸರು ನೊಂದಾಯಿಸಿದ್ದು, ಪ್ರತಿಯೊಬ್ಬರೂ ಈ ಸೌಲಭ್ಯವನ್ನು ಪಡೆದುಕೊಳ್ಳಲಿದ್ದಾರೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸೌಭಾಗ್ಯ, ಪುರಸಭಾ ಸದಸ್ಯರಾದ ಪಲ್ಲವಿ, ಭಾರತಿ ಎನ್., ಶಶಿಕಲಾ ಶೆಟ್ಟಿ, ಮಮತಾ, ಪುರಸಭೆ ಸಮನ್ವಯಾಧಿಕಾರಿ ಈಶ್ವರ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.