ಕಾರ್ಕಳ: ಭಾರತೀ ಸೇವಾ ಮಂಡಳಿ ಟ್ರಸ್ಟ್ ವತಿಯಿಂದ ನಡೆಸುವ ಚೇತನಾ ವಿಶೇಷ ಶಾಲೆಗೆ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದ ಸ್ವಾಮೀಜಿಯವರು ಇತ್ತೀಚಿಗೆ ಭೇಟಿ ನೀಡಿ ಶಾಲಾ ಮೂಲಸೌಕರ್ಯ ಹಾಗೂ ವಿದ್ಯಾರ್ಥಿಗಳ ಚಟುವಟಿಕೆಗಳನ್ನು ಗಮನಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟಿನ ಗೌರವಾಧ್ಯಕ್ಷ ಬಿ ಗಣಪತಿ ಹೆಗ್ಡೆ, ಅಧ್ಯಕ್ಷ ಎಂ ಗಣಪತಿ ಪೈ, ಕಾರ್ಯದರ್ಶಿ ರಘುನಾಥ ಶೆಟ್ಟಿ, ಕೋಶಾಧಿಕಾರಿ ವಿಜಯ್ ಕುಮಾರ್, ಟ್ರಸ್ಟಿ ಗೀತಾ ಜಿ ಪೈ, ಶಾಲೆಯ ಹಿತಚಿಂತಕರು ದಾನಿಗಳು ಆದ ಕಾರ್ಕಳ್ ಕಮಲಾಕ್ಷ ಕಾಮತ್, ಉದ್ಯಮಿಗಳಾದ ವಿಜಯ್ ಶೆಟ್ಟಿ, ಟಿ ಸುಧಾಕರ್ ಪ್ರಭು, ಅಲಹಬಾದ್ ಬ್ಯಾಂಕಿನ ನಿವೃತ್ತ ಇಆ ಎಂ ಆರ್ ನಾಯಕ್, ಯೂನಿಯನ್ ಬ್ಯಾಂಕ್‌ನ ನಿವೃತ್ತ ಮ್ಯಾನೇಜರ್ ದಿನೇಶ್ ಹೆಗ್ಡೆ, ಹರೀಶ್ ನಾಯಕ್, ಸದಾನಂದ ಶೆಟ್ಟಿ, ಶಶಿಕಾಂತ್ ಶೆಟ್ಟಿ ಉಪಸ್ಥಿತರಿದ್ದರು.