ಕಾರ್ಕಳ : ಸೇವಾ ಸಂಸ್ಥೆಗಳು ನಡೆಸುವ ಸೇವಾ ಕಾರ್ಯಗಳು ಅರ್ಹ ವ್ಯಕ್ತಿಗೆ ತಲುಪಿದಾಗ ಆ ಕಾರ್ಯ ಸಾರ್ಥಕವಾಗುತ್ತದೆ. ಹೆಚ್ಚಿನ ಜನರಿಗೆ ಇದರ ಸದುಪಯೋಗ ಸಿಗುವಂತಾಗಬೇಕು ಎಂದು ಕಾರ್ಕಳದ ಕೊಡುಗೈ ದಾನಿ ಕಮಲಾಕ್ಷ ಕಾಮತ್ ಹೇಳಿದರು.
ಅವರು ವಾಕ್ ಮತ್ತು ಶ್ರವಣ ವಿಭಾಗ ಯೆನಪೋಯ ಮೆಡಿಕಲ್ ಹಾಸ್ಪಿಟಲ್, ದೇರಳಕಟ್ಟೆ, ಮಂಗಳೂರು ಇವರ ಸಹಯೋಗದೊಂದಿಗೆ ಕಾರ್ಕಳ ಚೇತನಾ ವಿಶೇಷ ಶಾಲೆಯಲ್ಲಿ ವಾಕ್ ಮತ್ತು ಶ್ರವಣ ಸಮಸ್ಯೆಯಿರುವ ಕಾರ್ಕಳ ಪರಿಸರದ ಎಲ್ಲಾ ವಯೋಮಾನದವರಿಗೆ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಮಂಗಳೂರು ದೇರಳಕಟ್ಟೆ ಯೆನಪೋಯ ಮೆಡಿಕಲ್ ಕಾಲೇಜಿನ ಫಿಸಿಯೋಥೆರಪಿ ವಿಭಾಗದ ವೈಸ್ ಪ್ರಿನ್ಸಿಪಾಲ್ ಪ್ರೋಫೆಸರ್ ಅಸಿರ್ ಜೋನ್ ಸೋಲೋಮನ್, ವಾಕ್ ಮತ್ತು ಶ್ರವಣ ವಿಭಾಗದ ಅಸಿಸ್ಟೆಂಟ್ ಪ್ರೋಫೆರ‍್ಸ್ ಪ್ರಿಯಾಂಕ ನಾಯಕ್ ಮತ್ತು ಶ್ರೀಕಾಂತ್ ನಾಯಕ್, ಕಾರ್ಕಳ ಸುರಭಿ ಇಂಡಸ್ಟಿçÃಸ್‌ನ ಮಾಲಕರಾದ ಸುಧಾಕರ್ ಪ್ರಭು, ಭಾರತೀ ಸೇವಾ ಮಂಡಳಿ ಟ್ರಸ್ಟ್ನ ಅಧ್ಯಕ್ಷರಾದ ಎಂ ಗಣಪತಿ ಪೈ ಉಪಸ್ಥಿತರಿದ್ದರು.
ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಂಸ್ಥೆಯ ಸಂಚಾಲಕರಾದ ರಘುನಾಥ್ ಶೆಟ್ಟಿ ಸ್ವಾಗತಿಸಿ, ಕೋಶಾಧಿಕಾರಿ ಕೆ. ವಿಜಯ್‌ಕುಮಾರ್ ವಂದಿಸಿದರು. ಫಿಸಿಯೋಥೆರಪಿಸ್ಟ್ ಅಮಿತಾ ಕಾರ್ಯಕ್ರಮ ನಿರೂಪಿಸಿದರು.

