Share this news

ಕಾರ್ಕಳ: ಆಚರಣೆ ಮೂಲಕ ಸಂಭ್ರಮ, ಆರಾಧನೆಯ ಮೂಲಕ ಸಂತೃಪ್ತಿ. ಶ್ರೇಷ್ಠ ವೈಚಾರಿಕ ತತ್ವಗಳ ಮೂಲಕ ಬದುಕಿಗೆ ಅರ್ಥಪೂರ್ಣತೆಯ ಕಿರೀಟ ತುಡಿಸುವ ಹಬ್ಬವೇ ಬಕ್ರೀದ ಅಥವಾ ಇದು ಲ್ ಅಜ್ಜಹಾ. ಬಕ್ರೀದ್ ಆಚರಣೆಯು ಶಾಂತಿ ಸೌಹಾರ್ದ ಸಹೃದಯತೆ ಹಾಗೂ ಸಹೋದರ ಭಾವ ಉಕ್ಕಿಸುವ ಸಮತೆಯ ಪ್ರತೀಕವಾದರೆ ಬಕ್ರೀದ್ ನ ವಿಶಿಷ್ಟ ಸಾಮೂಹಿಕ ಪ್ರಾರ್ಥನೆಯು ವಿನೀತ ಭಾವದಲ್ಲಿ ಸೃಷ್ಟಿಕರ್ತನ ಮುಂದೆ ನಿಂತು ಅವನ ಮಹಾ ಕಾರುಣ್ಯಕ್ಕೆ ಸಲ್ಲಿಸುವ ಕೃತಜ್ಞತೆ. ತಾನು ಕೃತಜ್ಞನಲ್ಲವೆಂಬ ಸಂತ್ರಪ್ತಿಯ ಭಾವ ಪಡೆಯುವ ಪ್ರಯತ್ನ ಎಂದು ಜಾಮಿಯಾ ಮಸೀದಿಯ ಧರ್ಮ ಗುರುಗಳಾದ ಮೌಲಾನಾ ಜಹೀರ್ ಖಾಸ್ಮಿ ಹೇಳಿದರು.ಅವರು ಬಕ್ರೀದ್ ಹಬ್ಬದ ಪ್ರಯುಕ್ತ ವಿಶೇಷ ಪ್ರವಚನವನ್ನು ನೀಡಿದರು.

ಕಾರ್ಕಳ ಮುಸ್ಲಿಂ ಜಮಾತಿನ ಅಧ್ಯಕ್ಷರಾದ ಅಶ್ವತ್ ಅಹಮದ್ ಎಲ್ಲರಿಗೂ ಹಬ್ಬದ ಶುಭ ಸಂದೇಶವನ್ನು ನೀಡಿದರು. ನಮಾಜ್ ಮುಗಿದ ನಂತರ ಮುಸ್ಲಿಂ ಬಾಂಧವರು ಪರಸ್ಪರ ಹಬ್ಬದ ಶುಭಾಶಯಗಳು ಹಂಚಿಕೊAಡರು. ನಂತರ ತಮ್ಮ ಗುರು ಹಿರಿಯರ ಸಮಾಧಿಗಳ ಬಳಿ ತೆರಳಿ ಅವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು.

Leave a Reply

Your email address will not be published. Required fields are marked *