ಕಾರ್ಕಳ:ಇಂದಿನ ಆಧುನಿಕದ ಬದುಕಿನಲ್ಲಿ ಜನರಿಗೆ ಒಂದೆಡೆ ತಮ್ಮ ಎಲ್ಲಾ ಅಗತ್ಯ ವಸ್ತುಗಳು ಸಿಗುವಂತಾಗಬೇಕು, ಯಾವುದೇ ನಗರಗಳು ಬೆಳೆಯಬೇಕಾದರೆ, ಹೊಸಹೊಸ ವ್ಯಾಪಾರ,ಉದ್ಯಮಗಳು ಬೆಳೆಯಬೇಕು,ಇದರಿಂದ ಆರ್ಥಿಕತೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಖ್ಯಾತ ತುಳು ಚಲನಚಿತ್ರ ನಟ ಅರ್ಜುನ್ ಡಿ.ಕಾಪಿಕಾಡ್ ಹೇಳಿದರು.
ಅವರು ಕಾರ್ಕಳಸ ಜೋಡುರಸ್ತೆಯಲ್ಲಿನ ದುರ್ಗಾಪ್ರಸಾದ್ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಆರಂಭಗೊಂಡ ಎ1 ಸೂಪರ್ ಮಾರ್ಟ್ ಸಂಸ್ಥೆಯನ್ನು ಉದ್ಘಾಟಿಸಿ, ಸಂಸ್ಥೆಗೆ ಶುಭಕೋರಿದರು.
ಕಟ್ಟಡದ ಮಾಲಕ ಮುನಿಯಾಲು ಗಣೇಶ್ ನಾಯಕ್ ಮಾತನಾಡಿ, ಕಾರ್ಕಳದ ಮುಖ್ಯಪೇಟೆಯಂತಿರುವ ಜೋಡುರಸ್ತೆಯಲ್ಲಿ ಸುಮಾರು 3300 ಚದರ ಅಡಿಯ ಸಂಕೀರ್ಣದಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ 8 ಸಾವಿರಕ್ಕೂ ಮಿಕ್ಕಿ ವಿವಿಧ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಿರುವುದು ನಿಜಕ್ಕೂ ಶ್ಲಾಘನೀಯ ಎಂದರು.ಈ ಸಂಸ್ಥೆಗೆ ಉತ್ತರೋತ್ತರ ಯಶಸ್ಸು ಲಭಿಸಲಿ ಎಂದರು.
ಈ ಸಂದರ್ಭದಲ್ಲಿ ಕುಕ್ಕುಂದೂರು ಪಂಚಾಯಿತಿ ಅಧ್ಯಕ್ಷೆ ಉಷಾ ಕೆ ಮಾತನಾಡಿ, ಜನರ ದಿನಬಳಕೆಯ ಎಲ್ಲಾ ವಸ್ತುಗಳು ಉತ್ತಮ ಬೆಲೆಯಲ್ಲಿ ಹತ್ತಿರದಲ್ಲೇ ಸಿಗುವಂತಾಗಿದೆ, ದುರ್ಗಾಪರಮೇಶ್ವರಿ ದೇವಿಯ ಅನುಗ್ರಹ ಸದಾ ಈ ಸಂಸ್ಥೆಯ ಮೇಲಿರಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಕಾರ್ಕಳ ಶಾಖೆಯ ಮ್ಯಾನೇಜರ್ ಸುಧೀರ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕರು ಅತಿಥಿಗಣ್ಯರನ್ನು ಸ್ವಾಗತಿಸಿದರು.