ಕಾರ್ಕಳ: ಕಾರ್ಕಳ ತಾಲೂಕಿನ ಪ್ರತಿಷ್ಠಿತ ಸೊಸೈಟಿಗಳಲ್ಲಿ ಒಂದಾದ ಜೋಡುರಸ್ತೆಯಲ್ಲಿನ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ ನಡೆಯಿತು.
ಕಾರ್ಕಳದ ಪ್ರತಿಷ್ಟಿತ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ಮುಂದಿನ 5 ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ನಿರ್ದೇಶಕ ಮಂಡಳಿಗೆ ಕಡಾರಿ ರವೀಂದ್ರ ಪ್ರಭು ಕಾರ್ಕಳ, ಹರಿಶ್ಚಂದ್ರ ತೆಂಡುಲ್ಕರ್ ಮಾಳ, ಹರೀಶ್ ನಾಯಕ್ ಅಜೆಕಾರು, ರವೀಂದ್ರ ನಾಯಕ್ ನೀರೆ, ಸದಾನಂದ ಪಾಟ್ಕರ್ ಬಜಗೋಳಿ, ಸಚ್ಚಿದಾನಂದ ಪ್ರಭು ಕಣಂಜಾರು, ಮಂಜುನಾಥ ಪ್ರಭು ಹೆಬ್ರಿ,ವಿಶ್ವನಾಥ ಪಾಟ್ಕರ್ ಬೆಳ್ಮಣ್, ಸುನೀಲ್ ನಾಯಕ್ ಮಟ್ಟಾರು,ರಾಮಕೃಷ್ಣ ತೆಂಡುಲ್ಕರ್ ಹಿರ್ಗಾನ, ಇಂದುಮತಿ ಜಿ. ಪ್ರಭು ಜೋಡುರಸ್ತೆ, ಕಲಾವತಿ ಯು. ನಾಯಕ್ ಹಿರ್ಗಾನ, ರಂಜಿತ್ ಕುಮಾರ್ ಪೆರ್ಡೂರು, ರಮಾನಾಥ ನಾಯಕ್ ಕುಕ್ಕುಂದೂರು, ಹರೀಶ್ ಬಿ. ನಾಯಕ್ ಪಳ್ಳಿ, ದಿನೇಶ್ ನಾಯಕ್ ಹೆರ್ಮುಂಡೆ, ದೇವೇಂದ್ರ ಕಾಮತ್ ಎಳ್ಳಾರೆರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಈ ಪೈಕಿ ಕಡಾರಿ ರವೀಂದ್ರ ಪ್ರಭುರವರು ಸೊಸೈಟಿಯ ಸ್ಥಾಪನಾವಧಿಯಿಂದಲೂ ನಿರ್ದೇಶಕರಾಗಿದ್ದು, ಇದೀಗ ಸತತ 7ನೇ ಬಾರಿ ಆಡಳಿತ ಮಂಡಲಿಗೆ ಪ್ರವೇಶ ಪಡೆದಿರುತ್ತಾರೆ. ಅವಿರೋಧ ಆಯ್ಕೆಗೆ ಸಹಕರಿಸಿದ ಅರ್ಹ ಮತದಾರ ಸದಸ್ಯರಿಗೆ ಹಾಲಿ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ಕೃತಜ್ಞತೆ ಅರ್ಪಿಸಿ, ಮುಂದಿನ ದಿನಗಳಲ್ಲಿ ಸೊಸೈಟಿಯ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸುವಂತೆ ವಿನಂತಿಸಿರುತ್ತಾರೆ. ಚುನಾವಣಾಧಿಕಾರಿಯಾಗಿ ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್. ವಿ. ಕಾರ್ಯನಿರ್ವಹಿಸಿದ್ದು, ಪ್ರಧಾನ ವ್ಯವಸ್ಥಾಪಕ ಸುರೇಂದ್ರ ನಾಯಕ್‌ರವರು ಸಹಕರಿಸಿದರು.
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ