ಕಾರ್ಕಳ: ತಾಲೂಕಿನ ನಂದಳಿಕೆ ಗ್ರಾಮದ ಕಕ್ಕೆಪದವು ನಿವಾಸಿ ಶ್ರೀಕಾಂತ್ ಆಚಾರ್ಯ ಎಂಬವರ ಓಂಕಾರ್ ಜ್ಯುವೆಲ್ಲರ್ಸ್ ಎಂಬ ಆಭರಣದ ಅಂಗಡಿಯಿಂದ ಅಪರಿಚಿತ ವ್ಯಕ್ತಿಯೊಬ್ಬ 1,20,000 ರೂ. ಮೌಲ್ಯದ ಚಿನ್ನದ ಗಟ್ಟಿ ಕಳವುಗೈದಿರುವ ಘಟನೆ ಎ.3 ರಂದು ನಡೆದಿದೆ.
ಶ್ರೀಕಾಂತ್ ಆಚಾರ್ಯ ಚಿನ್ನದ ಆಭರಣ ಮಾಡುವ ಸಲುವಾಗಿ ಅಂಗಡಿಯ ಡ್ರಾವರ್‌ನಲ್ಲಿ 24 ಕ್ಯಾರೆಟ್‌ನ 20 ಗ್ರಾಂ ತೂಕದ 1,20,000 ರೂ. ಮೌಲ್ಯದ ಚಿನ್ನದ ಗಟ್ಟಿಯನ್ನು ಇರಿಸಿದ್ದರು.ಎ.6 ರಂದು ಕೆಲಸದ ಸಲುವಾಗಿ ಚಿನ್ನದ ಗಟ್ಟಿ ತೆಗೆಯಲು ಹೋದಾಗ ಗಟ್ಟಿ ಕಳುವಾಗಿರುವುದು ಬೆಳಕಿಗೆ ಬಂದಿದೆ. ಶ್ರೀಕಾಂತ್ ಅವರು ಅಂಗಡಿಯಲ್ಲಿದ್ದ ಸಿಸಿ ಟಿವಿಯನ್ನು ಪರಿಶೀಲಿಸಿದಾಗ ಎ.3 ರಂದು ಸಂಜೆ ಅಪರಿಚಿತ ವ್ಯಕ್ತಿಯೊಬ್ಬ ಅಂಗಡಿಯ ಡ್ರಾವರ್ ತೆರೆದು ಚಿನ್ನದ ಗಟ್ಟಿ ಎಗರಿಸಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.