Share this news

ಕಾರ್ಕಳ :ಕಾರ್ಕಳದ ಪ್ರತಿಷ್ಠಿತ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯು ತನ್ನ ಹೆಸರಾಂತ ಆರೋಗ್ಯ ತಜ್ಞರ ಸಮಿತಿಗೆ ಹೊಸ ತಜ್ಞರ ಸೇರ್ಪಡೆಯನ್ನು ಪ್ರಕಟಿಸಿದೆ.ಇದೇ ನವೆಂಬರ್ 9ರಿಂದ ಜಾರಿಗೆ ಬರುವಂತೆ ತಿಂಗಳ ಪ್ರತೀ ಗುರುವಾರ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮೂಳೆ ಮತ್ತು ಕೀಲು ವಿಭಾಗದ ಪ್ರಾಧ್ಯಾಪಕ ಡಾ. ಶರತ್ ಕುಮಾರ್ ರಾವ್ ಅವರು ಕಾರ್ಕಳದ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ ಸಮಾಲೋಚನೆಗಾಗಿ ಲಭ್ಯವಿರುತ್ತಾರೆ. ಅವರು ಮೂಳೆ ಮತ್ತು ಕೀಲು ಬದಲೀ ಜೋಡಣೆ ಮತ್ತಿತರ ಮೂಳೆ ಸಂಬಂಧಿತ ಶಸ್ತ್ರಚಿಕಿತ್ಸೆ ಕ್ಷೇತ್ರದಲ್ಲಿ ಅಪಾರ ಅನುಭವವುಳ್ಳ ಹಾಗೂ ನುರಿತ ತಜ್ಞರಾಗಿದ್ದಾರೆ.

ಡಾ. ಶರತ್ ಕುಮಾರ್ ರಾವ್ ಆವರ ಸೇರ್ಪಡೆಯಿಂದ ಕಾರ್ಕಳ ಸುತ್ತಮುತ್ತಲಿನ ಪ್ರದೇಶಗಳ ಹಾಗೂ ಸ್ಥಳೀಯ ರೋಗಿಗಳಿಗೆ ಸಕಾಲದಲ್ಲಿ ರೋಗ ಪತ್ತೆಹಚ್ಚಿ ಗುಣಮಟ್ಟದ ವೈದ್ಯಕೀಯ ಆರೈಕೆ ನೀಡಲು ಇನ್ನಷ್ಟು ಸಹಕಾರಿಯಾಗಲಿದೆ. ಇವರು ಪ್ರತೀ ಗುರುವಾರ ಸಂಜೆ ಗಂಟೆ 5:00 ರಿಂದ 6:30 ರವರೆಗೆ ಸಮಾಲೋಚನೆಗಳಿಗೆ ಲಭ್ಯವಿರುತ್ತಾರೆ. ಅವರನ್ನು ಸ್ವಾಗತಿಸಲು ನಾವು ಸಂತೋಷಪಡುತ್ತೇವೆ ಎಂದು ಡಾ.ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳದ ಮುಖ್ಯ ವೈದ್ಯಾಧಿಕಾರಿ ಡಾ ಕೀರ್ತಿನಾಥ ಬಲ್ಲಾಳ ತಿಳಿಸಿದ್ದಾರೆ.
ಸಾರ್ವಜನಿಕರು ಈ ಕುರಿತು
ಹೆಚ್ಚಿನ ಮಾಹಿತಿಗಾಗಿ, ದೂರವಾಣಿ ಸಂಖ್ಯೆ 9731601150 ಅಥವಾ 08258 230583 ಅನ್ನು ಸಂಪರ್ಕಿಸಬಹುದು.

 

 

 

 

 

 

 

 

Leave a Reply

Your email address will not be published. Required fields are marked *