Share this news

ಕಾರ್ಕಳ : ತಾಯಿಯ  ನಿಧನದ ಸುದ್ದಿ ತಿಳಿದು ಮಗಳು ಮನೆ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಈದು ನೂರಾಳ್ ಬೆಟ್ಟು  ಕಜೆ ಎಂಬಲ್ಲಿ ನಡೆದಿದೆ.

ಅನಾರೋಗ್ಯಕ್ಕೆ ತುತ್ತಾಗಿದ್ದ ಭಾಗಿ(65) ಎಂಬವರು ಮಂಗಳವಾರ ಬೆಳಿಗ್ಗೆ ಸುಮಾರು 10 ವೇಳೆಯಲ್ಲಿ ಮನೆಯಲ್ಲಿ ನಿಧನರಾಗಿದ್ದರು. ಈ ನಡುವೆ ಭಾಗಿಯವರ ಮಗಳು ರೇಖಾ(25) ಎಂಬಾಕೆ ಎಂದಿನಂತೆ ನಾರಾವಿಯ ಫ್ಯಾನ್ಸಿ ಅಂಗಡಿಯ ಕೆಲಸಕ್ಕೆ ಹೋಗಿದ್ದ ಸಂದರ್ಭ ಆಕೆಗೆ ಪರಿಚಯಸ್ಥರೊಬ್ಬರು ಕರೆ ಮಾಡಿ ತಾಯಿಗೆ ಸೌಖ್ಯವಿಲ್ಲ ಮನೆಗೆ ಬಾ ಎಂದು ಎಂದಿದ್ದರು.

ಅಸೌಖ್ಯದಲ್ಲಿ ಇರುವ ತಾಯಿಗೆ ಏನಾಯಿತ್ತೆಂಬ ಆತಂಕದಲ್ಲಿ  ತಾಯಿ ಮೃತಪಟ್ಟಿರಬೇಕೆಂಬ ಅನುಮಾನದ ಹಿನ್ನಲೆಯಲ್ಲಿ ಕೆಲಸದಿಂದ ಹಿಂತಿರುಗಿದ್ದ ರೇಖಾ ಮನೆಗೆ ಹೋಗುವ ಮುನ್ನವೇ ಮನೆಯ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆಗೈದಿದ್ದಾಳೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಕಳ  ಗ್ರಾಮಾಂತರ ಠಾಣಾಧಿಕಾರಿ ಹಾಗೂ ಸಿಬ್ಬಂದಿಯರು ಘಟನಾ ಸ್ಥಳಕ್ಕೆ ತೆರಳಿ  ಪರಿಶೀಲನೆ ನಡೆಸಿದ್ದಾರೆ .

Leave a Reply

Your email address will not be published. Required fields are marked *