ಕಾರ್ಕಳ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಕಾರ್ಕಳ ತಾಲೂಕು ಮಹಿಳಾ ಜ್ಞಾನವಿಕಾಸ ಕೇಂದ್ರಗಳು ಕಾರ್ಕಳ ತಾಲೂಕು ಅವರ ಜಂಟಿ ಆಶ್ರಯದಲ್ಲಿ ಅಂತರಾಷ್ಟಿçÃಯ ಮಹಿಳಾ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಮಾವೇಶ ಬಾಹುಬಲಿ ಪ್ರವಚನ ಮಂದಿರದಲ್ಲಿ ಶನಿವಾರ ಜರುಗಿತು.
ಸಮಾವೇಶ ಉದ್ಘಾಟಿಸಿ ಮಾತನಾಡಿದ ಡಾ. ಹೇಮಾವತಿ ಹೆಗ್ಗಡೆ, ಸಮಾಜದಲ್ಲಿ ಪ್ರತಿಯೊಬ್ಬರೂ ಸ್ವಾವಲಂಬಿಯಾಗಿ ಬದುಬೇಕು. ಬದುಕಿನ ನಿರ್ವಹಣೆಗೆ ಸಂಪಾದನೆ ಎನ್ನುವುದು ಅತ್ಯಂತ ಮೌಲ್ಯಯುತವಾದುದು ಎಂದು ಹೇಳಿದರು.
ಜ್ಞಾನವಿಕಾಸ ಕಾರ್ಯಕ್ರಮದಿಂದಾಗಿ ಮಹಿಳೆಯರು ಸ್ವಾವಲಂಬಿಗಳಾಗಿ ಧೈರ್ಯದಿಂದ ಸಮಾಜದಲ್ಲಿ ಬಾಳುವಂತಾಗಿದೆ. ಪ್ರತಿ ಪುರುಷನ ಒಳಗೆ ಓರ್ವ ಮಹಿಳೆಯಿದ್ದಾಳೆ ಹಾಗೆಯೇ ಪ್ರತಿ ಮಹಿಳೆಯೊಳಗೆ ಓರ್ವ ಪುರುಷನಿದ್ದಾನೆ. ಮಹಿಳೆ ಮತ್ತು ಪುರುಷನ ನಡುವೆ ಆರ್ಥಿಕತೆಯಲ್ಲಿ ಹೊಂದಾಣಿಕೆ ಇರುವುದರಿಂದ ಜೀವನ ಸುಸೂತ್ರವಾಗಿ ನಡೆಯುತ್ತಿದೆ ಎಂದರು.
ರಾಜ್ಯ ಇಂಧನ ಸಚಿವ ವಿ.ಸುನಿಲ್‌ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳಾ ಸಬಲೀಕರಣ ವಿಚಾರ ಹತ್ತು ಹದಿನೈದು ವರ್ಷಗಳ ಹಿಂದೆ ಮಾತಿಗೆ ಸೀಮಿತವಾಗಿತ್ತು. ಆದರೆ ಶ್ರೀ ಕ್ಷೇ. ಧ ಯೋಜನೆಯ ಮೂಲಕ ಮಹಿಳೆಯರು ಆರ್ಥಿಕವಾಗಿ ಸವಾವಲಂಬಿಗಳಾಗಿ ಸಬಲೀಕರಣಗೊಂಡಿದ್ದಾರೆ. ಮಹಿಳೆಯರ ಸಬಲೀಕರಣಕ್ಕೆ ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆಯವರ ಕೊಡುಗೆ ಸ್ಮರಣೀಯವೆಂದರು.
ಮಹಿಳೆಯ ಸ್ವಾವಲಂಬಿ ಬದುಕಿಗೆ ಸ್ವ ಉದ್ಯೋಗದ ಕುರಿತು ಉಪನ್ಯಾಸಕಿ ಅಕ್ಷಯ ಗೋಖಲೆ ವಿಚಾರ ಗೋಷ್ಠಿ ನಡೆಸಿಕೊಟ್ಟರು. ಡಾ. ಹೇಮಾವತಿ ಹೆಗ್ಗಡೆ ಯೋಜನೆಯ ಮಹಿಳೆಯರ ಜತೆ ಸಂವಾದ ನಡೆಸಿ ಮಾರ್ಗದರ್ಶನ ನೀಡಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆ, ವಿಜೇತ ವಿಶೇಷ ಶಾಲೆ ಸಂಸ್ಥಾಪಕಿ ಡಾ. ಕಾಂತಿ ಹೆಗ್ಡೆ, ಪ್ರಾದೇಶಿಕ ನಿರ್ದೇಶಕ ವಸಂತ್ ಸಾಲ್ಯಾನ್, ಜ್ಞಾನವಿಕಾಸ ವಿಭಾಗ ನಿರ್ದೇಶಕ ವಿಠಲ ಪೂಜಾರಿ, ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು, ಜ್ಞಾನವಿಕಾಸ ಯೋಜನಾಧಿಕಾರಿ ಸಂಗೀತ, ಪ್ರಾದೇಶಿಕ ಸಮನ್ವಯಧಿಕಾರಿ ಅಮೃತ, ಮುಖ್ಯ ಅತಿಥಿಗಳಾಗಿದ್ದರು.
ವಾತ್ಸಲ್ಯ ಕಿಟ್ ವಿತರಣೆ, ಮಹಿಳೆಯರ ವಾಹನ ಲೈಸೆನ್ಸ್ ವಿತರಣೆ, ನಿರ್ಗತಿಕರಿಗೆ ಮಾಶಾಸನ ವಿತರಣೆ ನಡೆಸಲಾಯಿತು.
ಜ್ಞಾನವಿಕಾಸ ಸಮಿತಿಯವರು, ಮೇಲ್ವಿಚಾರಕರು ಉಪಸ್ಥಿತರಿದ್ದರು. ಯೋಜನಾಧಿಕಾರಿ ಭಾಸ್ಕರ್ ವಿ. ಪ್ರಸ್ತಾವನೆಗೈದು, ಸ್ವಾಗತಿಸಿದರು. ಮೇಲ್ವಿಚಾರಕಿ ಮಲ್ಲಿಕಾ ಶೆಟ್ಟಿ ವಂದಿಸಿದರು. ಸೌಮ್ಯ ಶೆಟ್ಟಿ ನಿರೂಪಿಸಿದರು.