ಕಾರ್ಕಳ : ಕಾರ್ಕಳ ತಾಲೂಕಿನ ಕುಕ್ಕುಂದೂರಿನ ಲಿಜ್ ಪ್ಲಾಜಾ ಕಟ್ಟಡದ ಮುಂದೆ ನಿಲ್ಲಿಸಿದ್ದ ಬೈಕನ್ನು ತಡರಾತ್ರಿ ಕಳ್ಳರು ಕಳವುಗೈದಿರುವ ಘಟನೆ ಮಾ.18ರಂದು ನಡೆದಿದೆ.
ಎರ್ಲಪಾಡಿಯ ಅಕ್ಷಯ್ ಎಂಬವರು ಮಾ.18 ರಂದು ಕಾರ್ಕಳ ಬಂಡೀಮಠದಲ್ಲಿರುವ ಹೋಟೆಲ್ ಬಾಲಾಜಿ ಇನ್ ನಲ್ಲಿ ವೈಟರ್ ಕೆಲಸ ಮುಗಿಸಿ ರಾತ್ರಿ 12 ಗಂಟೆಗೆ ಕುಕ್ಕುಂದೂರಿನ ಲಿಜ್ ಪ್ಲಾಜಾ ಕಟ್ಟಡದಲ್ಲಿ ವಿಶ್ರಾಂತಿ ಪಡೆಯಲು ಹೋದವರು ಕಟ್ಟಡದ ಮುಂದೆ ತಮ್ಮ ಬೈಕ್ ನಿಲ್ಲಿಸಿ ಹೋಗಿದ್ದರು.
ಮಾ.19ರಂದು ಬೆಳಗ್ಗೆ ನೋಡಿದಾಗ ಕಟ್ಟಡದ ಮುಂದೆ ನಿಲ್ಲಿಸಿದ್ದ ಬೈಕ್ ಕಳುವಾಗಿತ್ತು. ಕಳವಾದ ಬೈಕನ್ನು ಸಾಕಷ್ಟು ಹುಡುಕಾಡಿ ಈವರೆಗೂ ಪತ್ತೆಯಾಗದ ಕಾರಣ ಇಂದು ತಡವಾಗಿ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ.