Share this news

ಕಾರ್ಕಳ: ರೋಟರಿ ಕ್ಲಬ್ ಕಾರ್ಕಳ ಇದರ ವಜ್ರಮಹೋತ್ಸವ ಸಂಭ್ರಮದ ಪ್ರಯುಕ್ತ ದೀಪಾವಳಿ ಗೂಡುದೀಪ ಸ್ಪರ್ಧೆಯನ್ನು ನವೆಂಬರ್ 19 ರವಿವಾರ ಸಂಜೆ 5 ರಿಂದ ರೋಟರಿ ಬಾಲಭವನದಲ್ಲಿ ಆಯೋಜಿಸಲಾಗಿದೆ.
ಸ್ಪರ್ಧೆಯಲ್ಲಿ ಸಾಂಪ್ರದಾಯಿಕ ಮತ್ತು ಆಧುನಿಕ ವಿಭಾಗಳಿದ್ದು ಸಾಂಪ್ರದಾಯಿಕ ವಿಭಾಗದಲ್ಲಿ ಗೂಡು ಮತ್ತು ಬಣ್ಣದ ಕಾಗದದ ಬಳಕೆಗೆ ಮಾತ್ರ ಅವಕಾಶವಿದೆ. ಆಧುನಿಕ ವಿಭಾಗದಲ್ಲಿ ಹೂ, ಎಲೆ, ಗರಿ, ಗಾಜು, ಪೇಪರ್, ನವದಾನ್ಯ ಇತ್ಯಾದಿಗಳನ್ನು ಬಳಸಲು ಅವಕಾಶವಿದೆ.

ಕಾರ್ಕಳದ ಸ್ಥಳೀಯರಿಗೆ ಗೂಡುದೀಪ ತಯಾರಿಸಲು ಪ್ರೋತ್ಸಾಹ ನೀಡುವ ಸಲುವಾಗಿ ಪ್ರತೇಕ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ಗುರುತು ಚೀಟಿ ಕಡ್ಡಾಯವಾಗಿದೆ.

ಆಕರ್ಷಕ ಬಹುಮಾನಗಳು ಪ್ರತೀ ವಿಭಾಗದ ಸ್ಪರ್ಧಾ ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವಾಗಿ ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರ, ಸಮಾಧಾನಕರ ಬಹುಮಾನ ವಿಜೇತರಿಗೆ ನಗದು ಹಾಗೂ ಪ್ರಶಸ್ತಿ ಪತ್ರ ಮತ್ತು ಭಾಗವಹಿಸಿ ಎಲ್ಲಾ ಸ್ಪರ್ಧಿಗಳಿಗೆ ಪ್ರಶಸ್ತಿ ಪತ್ರದೊಂದಿಗೆ ಗೌರವಾರ್ಪಣೆ ಮಾಡಲಾಗುವುದು ಎಂದು ರೋಟರಿ ಕ್ಲಬ್ ಅದ್ಯಕ್ಷ ಜಾನ್ ಆರ್ ಡಿ’ ಸಿಲ್ವ ಹಾಗೂ ಸರ್ಧೆಯ ಆಯೋಜಕರಾದ ಶುಭದರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

 

 

 

 

 

 

Leave a Reply

Your email address will not be published. Required fields are marked *