ಕಾರ್ಕಳ :ಕಾರ್ಕಳ ತಾಲೂಕು ಎರ್ಲಪಾಡಿ ಗ್ರಾಮದ ಕಾಂತರಗೋಳಿ ನಿವಾಸಿ ರಾಜು ಮೂಲ್ಯ (68 ವರ್ಷ) ಎಂಬವರಿಗೆ ಬೈಕ್ ಡಿಕ್ಕಿಯಾಗಿ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಾಜು ಮೂಲ್ಯ ಅವರು ಜುಲೈ 4ರಂದು ಮುಂಜಾನೆ ಕಾಂತರಗೋಳಿ ಕಡೆಯಿಂದ ಬೈಲೂರು ಕಡೆಗೆ ವಾಕಿಂಗ್ ಹೋಗುತ್ತಿದ್ದ ವೇಳೆ ಕಾಂತರಗೋಳಿ ಎಂಬಲ್ಲಿ ಹಿಂದಿನಿಂದ ಬಂದ ಸಂತೋಷ ಪೂಜಾರಿ ಎಂಬವರ ಬೈಕ್ ಡಿಕ್ಕಿಯಾಗಿದೆ. ಅಪಘಾತದ ಪರಿಣಾಮ ರಾಜು ಮೂಲ್ಯ ರಸ್ತೆಗೆ ಬಿದ್ದು ಗಾಯಗೊಂಡಿದ್ದು ಸಂತೋಷ ಪೂಜಾರಿ ಅವರನ್ನು ಚಿಕಿತ್ಸೆಗಾಗಿ ನಿಟ್ಟೆ ಗಾಜ್ರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ರಾಜು ಮೂಲ್ಯ ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತವೆಸಗಿದ್ದ ಸಂತೋಷ್ ಆಸ್ಪತ್ರೆಯ ಖರ್ಚನ್ನು ತಾನೇ ಭರಿಸುವುದಾಗಿ ಹೇಳಿದ್ದು ನಂತರ ಖರ್ಚನ್ನು ಕೊಡದ ಕಾರಣ ರಾಜು ಮೌಲ್ಯರವರು ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ.

