Share this news

ಕಾರ್ಕಳ: ಪೋಕ್ಸೋ ಪ್ರಕರಣ ಒಂದರಲ್ಲಿ ಆರೋಪಿಯಾಗಿದ್ದ ಯುವಕನೋರ್ವ ಸೋಮವಾರ ಸಂಜೆ ತನ್ನ ಸಂಬAಧಿಕರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಾರ್ಕಳದ ಕುಕ್ಕುಂದೂರು ಗ್ರಾಮದ ಹುಡ್ಕೋ ಕಾಲೊನಿ ನಿವಾಸಿ ಅಬ್ದುಲ್ ಎಂಬವರ ಮಗ ಮಹಮ್ಮದ್ ಯಾಸಿನ್ (22) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ.ಮಹಮ್ಮದ್ ಯಾಸೀನ್ ತನ್ನ ಸೋದರ ಮಾವ ಸಾಧಿಕ್ ಎಂಬುವವವರೊAದಿಗೆ ಅವರ ಮನೆಯಲ್ಲಿ ಹಾಸಿಗೆ ತಯಾರಿಸುವ ಕೆಲಸ ಮಾಡಿಕೊಂಡಿದ್ದ.

ಕೆಲ ಸಮಯದ ಹಿಂದೆ ಮಹಮ್ಮದ್ ಯಾಸೀನ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಆ ಬಳಿಕ ಈತ ನ್ಯಾಯಾಂಗ ಬಂಧನದಿAದ ಬಿಡುಗಡೆಯಾಗಿ ಉಡುಪಿ ಪೋಕ್ಸೋ ಕೋರ್ಟಿನಲ್ಲಿ ಪ್ರಕರಣದ ವಿಚಾರಣೆ ಎದುರಿಸುತ್ತಿದ್ದ. ಆಗಸ್ಟ್ 21ರಂದು ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಆರೋಪಿ ಮಹಮ್ಮದ್ ಯಾಸೀನ್ ಪೋಕ್ಸೋ ಪ್ರಕರಣದ ವಿಚಾರಣೆಗೆ ಹಾಜರಾಗಿ ಮನೆಗೆ ಬಂದಿದ್ದ. ಉಡುಪಿಯಿಂದ ಬಂದ ಮಹಮ್ಮದ್ ಯಾಸೀನ್ ಸಂಜೆ 4 ಗಂಟೆಗೆ ತನ್ನ ಮನೆಯ ಪಕ್ಕದಲ್ಲಿರುವ ಸೋದರ ಮಾವ ಸಾಧಿಕ್‌ರವರ ಮನೆಗೆ ಹೋದವನು 4.30 ಸುಮಾರಿಗೆ ಮನಮೊಂದು ಫ್ಯಾನಿಗೆ ಹಾಸಿಗೆ ಉಪಯೋಗಿಸುವ ಬಟ್ಟೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೂಡಲೇ ಮಹಮ್ಮದ್ ಯಾಸೀನ್‌ನನ್ನು ಕೆಳಗೆ ಇಳಿಸಿ ಕಾರ್ಕಳ ಸಿಟಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದರೂ ಯಾಸೀನ್ ಮೃತಪಟ್ಟಿದ್ದ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *