ಕಾರ್ಕಳ: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸೇವಾಕೇಂದ್ರದಲ್ಲಿ ರಕ್ಷಾ ಬಂಧನದ ಕಾರ್ಯಕ್ರಮದಲ್ಲಿ ದಾವಣಗೆರೆ ಸೇವಾಕೇಂದ್ರದ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜೀಯವರು ಪ್ರವಚನ ನೀಡುತ್ತಾ, ಪರಮಾತ್ಮನ ರಕ್ಷಣೆಯೇ ಸತ್ಯ ರಕ್ಷಾ ಬಂಧನವಾಗಿದೆ. ಮಾನವರು ಯಾವುದೇ ಬಂಧನದಲ್ಲಿ ಇರಲು ಬಯಸುವುದಿಲ್ಲ, ಅದರೆ ಪರಮಾತ್ಮನ ರಕ್ಷಣೆಯ ಬಂಧನದಲ್ಲಿ ಇರಲು ಬಯಸುತ್ತಾರೆ. ಲೌಕಿಕ ಸಹೋದರ- ಸಹೋದರಿಯರು ಬೇರೆ ಬೇರೆ ಇದ್ದಾಗ ರಕ್ಷಣೆ ನೀಡಲು ಸಾದ್ಯವಾಗುವುದಿಲ್ಲ. ನಮೆಲ್ಲರನ್ನು ರಕ್ಷಣೆ ಮಾಡುವವನು ಪರಮಾತ್ಮ ಆಗಿದ್ದಾರೆ. ನಾವೆಲ್ಲರೂ ಅವನ ಮಕ್ಕಳಾಗಿದ್ದೆವೆ. ಈ ಸತ್ಯವನ್ನು ಅರಿತು ಬಾಳಬೇಕಾಗಿದೆ. ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ರಾಖಿಯನ್ನು ಕಟ್ಟಲಾಯಿತು. ಬ್ರಹ್ಮಾಕುಮಾರಿ ವಸಂತಿ ಸ್ವಾಗತಿಸಿ, ಸೇವಾಕೇಂದ್ರದ ಸಂಚಾಲಕಿ ಬ್ರಹ್ಮಾಕುಮಾರಿ ವಿಜಯಲಕ್ಷಿö್ಮÃ ವಂದಿಸಿದರು.
ರಕ್ಷಾ ಬಂಧÀನದ ಅಂಗವಾಗಿ ಕಾರ್ಕಳದ ಶಾಸಕರು ಮತ್ತು ನಗರದ ತಹಸೀಲ್ದಾರ್, ತಾಲೂಕು ಕಚೇರಿ, ಪುರಸಭೆಯ ಕಚೇರಿ, ಬ್ಯಾಂಕ್ ಸಿಬಂದಿಯವರಿಗೆ, ವರ್ತಕರಿಗೆ, ಪೋಲಿಸ್ ಠಾಣಾಧಿಕಾರಿಯವರಿಗೆ ಮತ್ತು ತಾಲೂಕಿನ ಎಲ್ಲಾ ಕಚೇರಿಗಳಿಗೆ ರಾಖಿಯನ್ನು ಕಟ್ಟಿ ರಕ್ಷಾ ಬಂಧನದ ಸದೇಶವನ್ನು ನೀಡಲಾಯಿತು.