ಕಾರ್ಕಳ: ಸರಕಾರಿ ಬಸ್ ಚಾಲಕ ಮತ್ತು ಖಾಸಗಿ ಬಸ್ ಕಂಡಕ್ಟರ್ ನಡುವೆ ಜಗಳ ನಡೆದು ಕೊನೆಗೆ ಇಬ್ಬರೂ ಬಸ್ ನಿಲ್ದಾಣದಲ್ಲೇ ಹೊಡೆದಾಡಿಕೊಂಡ ಘಟನೆ ಕಾರ್ಕಳ ಬಸ್ ನಿಲ್ದಾಣದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಟೈಮಿಂಗ್ಸ್ ವಿಚಾರದಲ್ಲಿ ಬಸ್ ಚಾಲಕರಿಬ್ಬರು ಸಾರ್ವಜನಿಕ ಸ್ಥಳದಲ್ಲೇ ಕಿತ್ತಾಟ ನಡೆಸಿ ಬಳಿಕ ಹೊಡೆದಾಡಿಕೊಂಡ ಘಟನೆಯನ್ನು ಬಸ್ ನಿಲ್ದಾಣದಲ್ಲಿದ್ದ ನೂರಾರು ಜನ ದಂಗಾಗಿ ನೋಡಿದ್ದಾರೆ. ಸರಕಾರಿ ಬಸ್ ಚಾಲಕ ಮೊಹಮ್ಮದ್ ಸೈಯದ್ ಮತ್ತು ಖಾಸಗಿ ಬಸ್ ಕಂಡಕ್ಟರ್ ನಡುವೆ ಈ ಹೊಡೆದಾಟ ನಡೆದಿದೆ. ಕಾರ್ಕಳ ಉಡುಪಿ ಮಾರ್ಗದ ಸರಕಾರಿ ಬಸ್ ಹಾಗೂ ಕಾರ್ಕಳ ಪಳ್ಳಿ ಮಾರ್ಗದ ಬಸ್ ಚಾಲಕರ ನಡುವೆ ಸೈಡ್ ಕೊಡುವ ವಿಚಾರದಲ್ಲಿ ಇಬ್ಬರ ನಡುವೆ ವಾಗ್ವಾದ ಶುರುವಾಗಿ ಜಗಳಕ್ಕೆ ತಿರುಗಿದೆ. ಮಾತಿನ ಭರದಲ್ಲಿ ಇಬ್ಬರು ಬಸ್ ಚಾಲಕರ ಪರಸ್ಪರ ಅವಾಚ್ಯ ಪದಗಳಿಂದ ನಿಂದಿಸಿಕೊAಡು, ಈ ವೇಳೆ ಕೋಪಗೊಂಡ ಸರಕಾರಿ ಬಸ್ ಚಾಲಕ ಸೈಯದ್, ಖಾಸಗಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದಾನೆ. ಬಳಿಕ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ. ಜಗಳವನ್ನು ಬಿಡಿಸಬೇಕಿದ್ದ ಸಾರ್ವಜನಿಕರು ಹೊಡೆದಾಟದ ದೃಶ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು ಸಧ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.