ಕಾರ್ಕಳ : ಭಾರತೀಯ ಕಿಸಾನ್ ಸಂಘ ಕಾರ್ಕಳ ತಾಲೂಕು ಸಮಿತಿ ಮಾಸಿಕ ಸಭೆಯು ಜು.1ರಂದು ಸಂಘದ ಕಾರ್ಯಲಯದಲ್ಲಿ ಅಧ್ಯಕ್ಷರಾದ ಗೋವಿಂದ ರಾಜ್ ಭಟ್ ಕಡ್ತಲ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಜಿಲ್ಲಾ ಉಪಾಧ್ಯಕ್ಷರಾದ ಶ್ರೀನಿವಾಸ ಭಟ್ ಇರ್ವತ್ತೂರು ಮಾತನಾಡಿ, ರಾಜ್ಯಮಟ್ಟದಲ್ಲಿ ಅಭ್ಯಾಸ ವರ್ಗಗಳು ನಡೆಯುತ್ತಿದ್ದು, ನಮ್ಮ ಜಿಲ್ಲೆಯಲ್ಲಿಯೂ ಅಭ್ಯಾಸವರ್ಗಗಳನ್ನು ನಡೆಸುವ ಉದ್ದೇಶವಿದೆ. ಆ ನಿಟ್ಟಿನಲ್ಲಿ ಆಗಸ್ಟ್ ತಿಂಗಳಲ್ಲಿ ಕಾರ್ಕಳ ತಾಲೂಕಿನ ಅಭ್ಯಾಸವರ್ಗವನ್ನು ನಡೆಸಲು ತೀರ್ಮಾನಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಜಿಲ್ಲೆ, ಪ್ರಾಂತ, ರಾಜ್ಯ ಮತ್ತು ರಾಷ್ರಿö್ಟÃಯ ಮಟ್ಟದ ಪದಾಧಿಕಾರಿಗಳು ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸದಸ್ಯರು ಭಾಗವಹಿಸಿ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು.ಕೃಷಿ ಪೂರಕ ಉತ್ಪನ್ನಗಳನ್ನು ಉತ್ಪಾದಿಸುವ ಸಂಸ್ಥೆಯ ಪ್ರತಿನಿಧಿಗಳು ಸಾವಯವ ಕೃಷಿ ಪದ್ಧತಿಗೆ ಪೂರಕವಾದ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು.
ಗೋವಿಂದರಾಜ ಭಟ್ ಮಾತನಾಡಿ, ಪ್ರಸಕ್ತ ನಮ್ಮ ಜಿಲ್ಲೆಯಲ್ಲಿ ವಾಡಿಕೆಗಿಂತ ವಿಪರೀತ ಕಡಿಮೆ ಮಳೆಯಾಗುತ್ತಿದೆ. ಅಲ್ಲದೆ ಮಳೆಗಾಲವು ತುಂಬಾ ತಡವಾಗಿ ಪ್ರಾರಂಭವಾದ ಕಾರಣ ಎಲ್ಲಾ ಕೃಷಿ ಚಟುವಟಿಕೆಗಳು ತೀವ್ರ ಹೊಡೆತ ಅನುಭವಿಸಿದೆ. ತೆಂಗಿನ ಕಾಯಿ ಬೆಲೆ ಪಾತಾಳಕ್ಕೆ ಕುಸಿದಿದೆ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿರಿಸಿ ಜಿಲ್ಲೆಯ ರೈತರಿಗೆ ಒಂದು ವಿಶೇಷ ಪ್ಯಾಕೇಜನ್ನು ಸರಕಾರ ಘೋಷಿಸಬೇಕು. ಈ ನಿಟ್ಟಿನಲ್ಲಿ ಸಂಬAಧಿಸಿದವರಿಗೆ ರೈತರ ಸಮಸ್ಯೆಯ ವಿಸ್ತೃತ ವರದಿಯನ್ನು ನೀಡಲಾಗುವುದು ಎಂದರು.

ಸಭೆಯಲ್ಲಿ ಉಪಾಧ್ಯಕ್ಷರಾದ ಸುಂದರ ಶೆಟ್ಟಿ, ಖಜಾಂಚಿ ಹರೀಶ್ ಕಲ್ಯಾ, ಶೈಲೇಶ್ ಮರಾಠೆ ಈದು, ಕರುಣಾಕರ ಶೆಟ್ಟಿ ಬೋಳ, ಗ್ರಾಮ ಮತ್ತು ತಾಲೂಕು ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಇನ್ನಾ ಕಾರ್ಯಕ್ರಮ ನಿರೂಪಿಸಿದರು.

