ಕಾರ್ಕಳ : ಭಾರತೀಯ ಕಿಸಾನ್ ಸಂಘ ಕಾರ್ಕಳ ತಾಲೂಕು ಸಮಿತಿಯ ಮಾಸಿಕ ಸಭೆಯು ಸಂಘದ ಕಾರ್ಯಾಲಯದಲ್ಲಿ ಏ.1 ರಂದು ನಡೆಯಿತು.
ಸಂಘದ ಅಧ್ಯಕ್ಷ ಗೋವಿಂದರಾಜ್ ಭಟ್ ಕಡ್ತಲ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರು ತಮ್ಮ ಫಸಲನ್ನು ಕಾಡುಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಹಾಗೂ ಕಾಡುಪ್ರಾಣಿಗಳನ್ನು ಬೆದರಿಸಿ ಓಡಿಸಲು ಮಸಿ ಆಧಾರಿತ ಬಂದೂಕನ್ನು ಪರವಾನಿಗೆ ಪಡೆದು ಹೊಂದಿgದ್ದಾರೆ. ಈಗ ಬೇಸಿಗೆ ಸಂದರ್ಭವಾಗಿರುವುದರಿAದ ಕಾಡುಪ್ರಾಣಿಗಳಿಗೆ ಕಾಡಿನಲ್ಲಿ ನೀರು ಹಾಗೂ ಆಹಾರದ ಕೊರತೆ ಇರುವ ಕಾರಣ ಕೃಷಿ ಭೂಮಿಗೆ ಹಾವಳಿ ಮಾಡುತ್ತವೆ. ಚುನಾವಣೆಗಳು ನಡೆಯುತ್ತಲೇ ಇರುತ್ತವೆ, ಪ್ರತೀ ಚುನಾವಣೆಗಳ ಸಂದರ್ಭದಲ್ಲಿ ರೈತರು ತಮ್ಮ ಪರವಾನಿಗೆಯ ಕೋವಿಗಳನ್ನು ಪೋಲಿಸ್ ಠಾಣೆಯಲ್ಲಿ ಠೇವಣಿ ಇಡುವಂತೆ ಆದೇಶಿಸಲಾಗುತ್ತದೆ.ಆದರೆ ರೈತರು ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆ ಈ ಸಂದರ್ಭದಲ್ಲಿ ಬಹುತೇಕ ನಾಶವಾಗಿ ಹೋಗುತ್ತದೆ.
ಆದುದರಿಂದ ಹಲವಾರು ವರ್ಷಗಳಿಂದ ಭಾ.ಕಿ.ಸಂ ಬಂದೂಕು ಠೇವಣಿ ಇಡುವುದರಿಂದ ವಿನಾಯಿತಿಯನ್ನು ಕೋರಿ ಸಂಬAಧಿಸಿದ ಇಲಾಖೆಗೆ ಮನವಿ ಸಲ್ಲಿಸಿದೆ. ಅಲ್ಲದೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಗಮನಕ್ಕೆ ತಂದು ಸಮಸ್ಯೆಯ ಗಂಭೀರತೆಯನ್ನು ಸಂಪೂರ್ಣವಾಗಿ ಮನವರಿಕೆ ಮಾಡಿಕೊಟ್ಟಿದೆ. ಆದರೆ ರೈತರ ಸಮಸ್ಯೆಗೆ ಈವರೆಗೆ ಯಾರೂ ಸ್ಪಂದಿಸಿಲ್ಲ. ಇದೀಗ ಮತ್ತೊಮ್ಮೆ ಚುಣಾವಣೆ ಬಂದಿದ್ದು ರೈತರು ತಮ್ಮ ಬಂದೂಕನ್ನು ಠೇವಣಿ ಇರಿಸಿ ತಮ್ಮ ಬೆಳೆಯನ್ನು ಕಾಡುಪ್ರಾಣಿಗಳಿಗೆ ಆಹುತಿ ನೀಡಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾರೆ. ಆದ್ದರಿಂದ ಈ ಬಗ್ಗೆ ಗಮನಹರಿಸಿ ವಾಸ್ತವಿಕತೆ ಅರಿತು ತೀರಾ ಅಗತ್ಯವಿರುವ ರೈತರಿಗೆ ಬಂದೂಕಿನ ಠೇವಣಿ ಇಡಲು ವಿನಾಯಿತಿ ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ಚರ್ಮಗಂಟುರೋಗ ಮತ್ತೆ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದು, ರೋಗ ನಿರೋಧಕ ಔಷಧಿಯು ಕಿಸಾನ್ ಸಂಘದಲ್ಲಿ ಲಭ್ಯವಿದ್ದು ಅವಶ್ಯಕತೆಯಿದ್ದವರು ಸಂಘವನ್ನು ಸಂಪರ್ಕಿಸುವAತೆ ತಿಳಿಸಿದರು.
ಜಿಲ್ಲಾಧ್ಯಕ್ಷರಾದ ನವೀನ್‌ಚಂದ್ರ ಜೈನ್ ಮಾತನಾಡಿ, ರೈತ ಸಂಘಟನೆಯಲ್ಲಿ ಸಕ್ರಿಯರಾಗುವ ಮೂಲಕ ಸಂಘಟನೆಯನ್ನು ಬಲಗೊಳಿಸಬೇಕೆಂದು ಕರೆ ನೀಡಿದರು.
ಉಪಾಧ್ಯಕ್ಷರಾದ ಮೋಹನದಾಸ್ ಅಡ್ಯಂತಾಯ, ಕೆ.ಪಿ.ಭಂಡಾರಿ, ಸುಂದರ ಶೆಟ್ಟಿ, ಖಜಾಂಚಿ ಹರೀಶ್ ಕಲ್ಯಾ, ಕರುಣಾಕರ ಶೆಟ್ಟಿ ಬೋಳ, ಶೇಖರ ಶೆಟ್ಟಿ ನೀರೆ, ಗ್ರಾಮ ಮತ್ತು ತಾಲೂಕು ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಇನ್ನಾ ಕಾರ್ಯಕ್ರಮ ನಿರೂಪಿಸಿದರು.