ಕಾರ್ಕಳ : ಇಂದು ಕೂಡ ಹಲವು ವಿದ್ಯಾರ್ಥಿಗಳಿಗೆ ಕಲಿಕೆಯ ಸಂದರ್ಭದಲ್ಲಿ ಸಾಕಷ್ಟು ಆರ್ಥಿಕ ಮುಗ್ಗಟ್ಟುಗಳು ಇರುತ್ತವೆ. ಇದರಿಂದಾಗಿ ಕಲಿಕೆಯನ್ನು ಮುಂದುವರಿಸುವಲ್ಲಿ ಕಷ್ಟಪಡುತ್ತಾರೆ. ಇದನ್ನು ಗಮನಿಸಿ ಸಮಾಜದ ಹಲವು ಮಹನೀಯರು ಕೈಜೋಡಿಸುತ್ತಾರೆ. ಇವರುಗಳು ಕಾಲೇಜಿನಲ್ಲಿ ದೊಡ್ಡಮೊತ್ತವನ್ನು ಠೇವಣಿ ಇರಿಸಿ ಅದರ ಬಡ್ಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಾರೆ. ವಿದ್ಯಾರ್ಥಿಗಳು ಅದನ್ನು ವಿದ್ಯಾರ್ಜನೆಗಷ್ಟೇ ವಿನಿಯೋಗಿಸಿ ಆ ಸವಲತ್ತುಗಳನ್ನು ಪಡೆದುಕೊಂಡು ಸಂಪೂರ್ಣ ಲಕ್ಷö್ಯವಹಿಸಿ ಕಲಿಕೆಯಲ್ಲಿ ತೊಡಗಿಸಿಕೊಂಡು ಸಮಾಜದ ಜವಾಬ್ದಾರಿಯುತ ನಾಗರಿಕರಾಗಿ ಹೊರಹೊಮ್ಮಿ ಕಾಲೇಜಿಗೆ, ಹೆತ್ತವರಿಗೆ ಕೀರ್ತಿಯನ್ನು ತರುವಂತಾದರೆ ಅದೇ ನಮಗೆ ಕೊಡುವ ಅಪೂರ್ವ ಕೊಡುಗೆ ಎಂದು ಶ್ರೀ ಭುವನೇಂದ್ರ ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ ಎ. ಕೋಟ್ಯಾನ್ ಹೇಳಿದರು.
ಅವರು ಕಾರ್ಕಳದ ದಿವಂಗತ ವಕೀಲ ವಾಸುದೇವ ಕಾಮತ್ ಅವರ ಸ್ಮರಣಾರ್ಥ ಅವರ ಸುಪುತ್ರ ಕಾಲೇಜಿನ ಪೂರ್ವ ವಿದ್ಯಾರ್ಥಿ ಸಿಎ ಕಮಲಾಕ್ಷ ಕಾಮತ್ ಅವರು ಎರಡೂವರೆ ಲಕ್ಷ ಮೊತ್ತದ ವಿದ್ಯಾರ್ಥಿ ವೇತನವನ್ನು ಐವತ್ತು ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರ ರೂಪಾಯಿಯನ್ನು ವಿತರಿಸಿ ಮಾತನಾಡಿದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ದತ್ತಾತ್ರೇಯ ರಾವ್ ಮಾತನಾಡಿ ಅನ್ನ, ಅಕ್ಷರ ಮತ್ತು ಆರೋಗ್ಯಕ್ಕೆ ತಮ್ಮ ಧನವನ್ನು ವಿನಿಯೋಗಿಸುವವರು ಸಮಾಜದ ನಿಜವಾದ ಬೆನ್ನೆಲುಬು. ಇಂದು ಧನವಂತರು ಹಲವರಿದ್ದರು ಈ ಬಗೆಯಲ್ಲಿ ವಿದ್ಯಾಭ್ಯಾಸದ ಕಷ್ಟಗಳಿಗೆ ಸ್ಪಂದಿಸುವವರು ತೀರಾ ವಿರಳ. ಕಾರ್ಕಳದ ಸಿಎ ಕಮಲಾಕ್ಷ ಕಾಮತರು ಕಾಲೇಜಿನ ಪೂರ್ವ ವಿದ್ಯಾರ್ಥಿ ಎಂಬುದು ನಮ್ಮ ಹೆಮ್ಮೆ ಎಂದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ವ್ಯವಹಾರ ಅಧ್ಯಯನ ವಿಭಾಗದ ಮುಖ್ಯಸ್ಥ ನಂದಕಿಶೋರ್ ಅವರು ಮಾತನಾಡಿ, ದಿ. ವಾಸುದೇವ ಕಾಮತ್, ನಂತರದಲ್ಲಿ ಅವರ ಸುಪುತ್ರ ಶಾಂತಾರಾಮ ಕಾಮತರು,ಇದೀಗ ಅವರ ಮತ್ತೊರ್ವ ಸುಪುತ್ರ ಕೆ. ಕಮಲಾಕ್ಷ ಕಾಮತ್ ಅವರು ಕಾಲೇಜಿನ ಮೇಲೆ ಅಪಾರ ಗೌರವವನ್ನಿಟ್ಟುಕೊಂಡವರು. ಕೊಡುಗೈ ದಾನಿ ಕೆ. ಕಮಲಾಕ್ಷ ಕಾಮತರ ಕೊಡುಗೆಯನ್ನು ನಾವೆಷ್ಟು ಸ್ಮರಿಸಿಕೊಂಡರೂ ಸಾಲದು ಎಂದರು.
ಇAಗ್ಲೀಷ್ ವಿಭಾಗದ ಉಪನ್ಯಾಸಕಿ ಕು. ಶೃಂಗ ವಂದಿಸಿದರು. ಅಂಗ್ಲಭಾಷಾ ಉಪನ್ಯಾಸಕಿ ಪದ್ಮಶ್ರೀ ಸ್ವಾಗತಿಸಿ ,ಕಾರ್ಯಕ್ರಮ ನಿರೂಪಿಸಿದರು.