Share this news

ಕಾರ್ಕಳ : ದೇಶವನ್ನು ಕಟ್ಟುವ ಮತ್ತು ಉಳಿಸಿಕೊಳ್ಳುವ ಜವಾಬ್ದಾರಿ ಇಂದಿನ ಯುವಕರಲ್ಲಿದೆ. ನಮ್ಮ ವ್ಯಕ್ತಿತ್ವವನ್ನು ನಾಶಮಾಡುವ ಮಾದಕದ್ರವ್ಯಗಳ ಬಗ್ಗೆ ಸದಾ ನಾವು ಜಾಗ್ರತೆಯನ್ನು ಹೊಂದಿರಬೇಕು. ಜತೆಗೆ ನಮ್ಮ ಸುತ್ತಮುತ್ತ ಅದರ ಮಾಹಿತಿ ಸಿಕ್ಕಿದ ತಕ್ಷಣ ಸಂಬAಧಿತರಿಗೆ ತಿಳಿಸಿದರೆ ಆ ಜಾಲವನ್ನೇ ನಿರ್ಮೂಲನೆ ಮಾಡಲು ಅನುಕೂಲವಾಗುತ್ತದೆ. ವಿದ್ಯಾರ್ಥಿಗಳು ಜೀವನದಲ್ಲಿ ಓದು , ಹೆಚ್ಚಿನ ಅಧ್ಯಯನದ ಕಡೆಗೆ ಗಮನ ನೀಡಿದರೆ ಇವುಗಳೆಲ್ಲ ಹತ್ತಿರ ಸುಳಿಯಲಾರವು ಎಂದು ನ್ಯಾಯವಾದಿ ಶುಭಾ ಹೇಳಿದರು.
ಅವರು ಕಾರ್ಕಳ ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಕಾರ್ಕಳ ವತಿಯಿಂದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ನಡೆದ ಮಾದಕದ್ರವ್ಯ ನಿರ್ಮೂಲನೆ ಜಾಗೃತಿಯ ಮಾಹಿತಿ ಶಿಬಿರದಲ್ಲಿ ಮಾತನಾಡುತ್ತಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ ಎ.ಕೋಟ್ಯಾನ್ ಮಾತನಾಡಿ, ನಿರಂತರವಾಗಿ ಇಂತಹ ಕಾರ್ಯಕ್ರಮಗಳು ನಡೆದಾಗ ಯುವಶಕ್ತಿ ಬದಲಾಗಿ ದೇಶದ ಆಸ್ತಿಯಾಗುವುದರಲ್ಲಿ ಸಂಶಯವಿಲ್ಲವೆAದರು.
ಕಾರ್ಕಳದ ಪ್ರಧಾನ ಸಿವಿಲ್ ನ್ಯಾಯಾಧೀಶರೂ, ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಕೋಮಲ ಆರ್.ಸಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾನೂನಿನ ಮೂಲಕ ಶಿಸ್ತನ್ನು ತರುವುದಕ್ಕಿಂತ ತಾವೇ ಅರಿತು ದುಶ್ಚಟಗಳನ್ನು ದೂರಮಾಡುವುದು ಹೆಚ್ಚು ಅಪೇಕ್ಷಣೀಯವೆಂದರು.

ಕಾರ್ಕಳದ ಎರಡನೇ ಹೆಚ್ಚುವರಿ ನ್ಯಾಯಾಧೀಶ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಢಾಧಿಕಾರಿಗಳಾದ ಅಬು ತಾಹಿರ್ ಅವರು ಮಾತನಾಡಿ, ನಮ್ಮ ಭವಿಷ್ಯದ ಕನಸುಗಳ ಬಗ್ಗೆ ವಿದ್ಯಾರ್ಥಿಗಳು ಸದಾ ಯೋಚನೆ ಮಾಡಬೇಕು. ವಿದ್ಯಾರ್ಥಿಗಳು ತಮ್ಮ ಅರ್ಹತೆಗಳನ್ನು ಒರೆಗೆ ಹಚ್ಚಿ ದೇಶಕ್ಕೆ ಸಂಪತ್ತಾಗಬೇಕು ಎಂದರು.
ಕಾರ್ಕಳ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಸುನಿಲ್ ಕುಮಾರ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಸದಾ ಶಿಸ್ತು, ಸಂಯಮಗಳ ಕಡೆಗೆ ಗಮನ ಕೊಡುವುದು ಅಗತ್ಯ. ಅದರಿಂದಾಗಿ ಸಾಧನೆಗೆ ಅನುಕೂಲವಾಗುತ್ತದೆ ಎಂದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ದತ್ತಾತ್ರೇಯ ಮಾರ್ಪಳ್ಳಿ ಮಾದಕದ್ರವ್ಯಗಳಿಂದಾಗುವ ಕೆಡುಕಿನ ಕುರಿತು ಮಾಹಿತಿಗಳನ್ನು ನೀಡಿದರು.
ಹಿಂದಿ ವಿಭಾಗ ಮುಖ್ಯಸ್ಥರಾದ ಪ್ರೊ ನಾಗಭೂಷಣ್ ಸ್ವಾಗತಿಸಿ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ವನಿತಾ ಶೆಟ್ಟಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

 

 

 

 

Leave a Reply

Your email address will not be published. Required fields are marked *