Share this news

ಕಾರ್ಕಳ : ಯಾವ ಅಧ್ಯಯನ ಶಿಸ್ತುಗಳು ಕೂಡ ಯಾವ ಕಾಲಕ್ಕೂ ಬೇಡವೆಂದು ಆಗದು. ತಮ್ಮ ತೊಡಗಿಸಿಕೊಳ್ಳುವಿಕೆ ಮತ್ತು ಇನ್ನಿತರ ಕಲಾವಿಚಾರಗಳಲ್ಲಿ ಪಾಲು ಪಡೆದರೆ ಅವಕಾಶಗಳನ್ನು ನೀಡುವುದಲ್ಲದೆ, ಬದುಕು ತುಂಬಾ ಅರ್ಥಪೂರ್ಣವಾಗುತ್ತದೆ. ಮಾನವಿಕ ಅಧ್ಯಯನಶಿಸ್ತುಗಳು ಬದುಕಿಗೆ ವಿಶಾಲ ದೃಷ್ಟಿಕೋನವನ್ನು ಒದಗಿಸಿಕೊಡುತ್ತದೆ. ಕೇವಲ ದುಡ್ಡು, ಜೀವನ ಎಂದು ಮುಂದುವರಿದರೆ ನಾವು ಯಾವತ್ತೂ ಸಂತೋಷವನ್ನು ಕಡಿಮೆ ಪಡೆಯುತ್ತೇವೆ. ಸುಖವನ್ನು ತಾನು ಪಡೆಯುವುದರ ಜೊತೆಗೆ ಇನ್ನೊಬ್ಬನಿಗೂ ಕೊಡುವುದರ ಮೂಲಕ ಅರ್ಥಪೂರ್ಣವಾಗಿ ಬದುಕು ಮಾಡಬಹುದು .ಅದ್ದರಿಂದ ನಾವು ಯಾವತ್ತೂ ಪರೋಪಕಾರಿಯಾಗಿ ಬದುಕು ಮಾಡುವುದಕ್ಕೆ ಕಲಿಯಬೇಕು. ಇವನ್ನೆಲ್ಲಾ ಹೆಚ್ಚು ಅರ್ಥಪೂರ್ಣವಾಗಿ ವಿದ್ಯಾರ್ಥಿಯ ಮನಕ್ಕೆ ತುರುಕುವುದು ಮಾನವಿಕ ವಿಭಾಗಗಳೆಂದು ಕಾರ್ಕಳದ ಮಂಜುನಾಥ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತç ವಿಭಾಗದ ಸಹ ಪ್ರಾಧ್ಯಾಪಕ ಡಾ. ಸುದರ್ಶನ್ ಪಿ. ಅವರು ಹೇಳಿದರು.
ಅವರು ಶ್ರೀ ಭುವನೇಂದ್ರ ಕಾಲೇಜಿನ ಮಾನವಿಕ ಸಂಘದ ಪ್ರಸಕ್ತ ವರುಷದ ಕಾರ್ಯಚಟುವಟಿಕೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ್. ಎ. ಕೋಟ್ಯಾನ್ ಅವರು ವಹಿಸಿ, ವಿದ್ಯಾರ್ಥಿಗಳು ಇಂತಹ ಕೋರ್ಸುಗಳಿಗೆ ಸೇರಿದ ಮೇಲೆ ವಿವಿಧ ಮಗ್ಗಲುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಬದುಕಿಗೆ ಅನುಕೂಲಕರವಾಗಿ ಪರಿಣಮಿಸುತ್ತವೆ ಎಂದರು.

ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ದತ್ತಾತ್ರೇಯ ಮಾರ್ಪಳ್ಳಿಯವರು ಸಮಾರಂಭದಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಮಾನವಿಕ ಸಂಘದ ಸಂಯೋಜಕ ಹಾಗೂ ಅರ್ಥಶಾಸ್ತç ವಿಭಾಗ ಮುಖ್ಯಸ್ಥರಾದ ಪ್ರೊ. ಶಿವಕುಮಾರ್ ಅವರು ಪ್ರಸ್ತಾವನೆಗೈದರು. ಮಾನವಿಕ ಸಂಘದ ಕಾರ್ಯದರ್ಶಿಗಳಾದ ಅವಿನ ಎಸ್.ಕುಂದಾಪುರ , ತೃತೀಯ ಬಿ.ಎ. ಹಾಗೂ ಪ್ರಜ್ಞಾ ಅವರು ಉಪಸ್ಥಿತರಿದ್ದರು. ದ್ರವ್ಯ ದ್ವಿತೀಯ ಬಿ.ಎ. ಸ್ವಾಗತಿಸಿ, ವಿಠೋಬ ತೃತೀಯ ಬಿ.ಎ. ವಂದಿಸಿದರು. ಶ್ವೇತಾ ದ್ವಿತೀಯ ಬಿ.ಎ. ಕಾರ್ಯಕ್ರಮ ನಿರೂಪಿಸಿದರು.

 

 

 

 

 

 

 

 

Leave a Reply

Your email address will not be published. Required fields are marked *