ಕಾರ್ಕಳ : ಬದುಕಿನಲ್ಲಿ ಹೊಸತನ, ನಿಸ್ವಾರ್ಥತೆ, ಸಮಯಪ್ರಜ್ಞೆ, ಶಿಸ್ತು, ಸಹಬಾಳ್ವೆ, ಹೊಂದಾಣಿಕೆಯ ಜೊತೆಗೆ ಸೇವಾಮನೋಭಾವದೊಂದಿಗೆ ವ್ಯಕ್ತಿತ್ವವಿಕಸನದ ಪೂರ್ಣಪಾಠ ಕಾಲೇಜಿನ ವಿದ್ಯರ್ಥಿಗಳಿಗೆ ರಾಷ್ಟ್ರೀಯಸೇವಾ ಯೋಜನೆಯಿಂದಾಗುತ್ತದೆ. ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯ ಜಾಗೃತಿಯನ್ನು ಬಿತ್ತುವ ಮಹತ್ತರ ಕೆಲಸವನ್ನು ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕ ಮಾಡುತ್ತದೆ. ವಿದ್ಯಾರ್ಥಿಗಳು ಈ ಘಟಕಕ್ಕೆ ಸೇರುವುದರಿಂದ ಸತ್ಪçಜೆಗಳಾಗಿ ದೇಶಸೇವೆಗೆ ಕಂಕಣಬದ್ಧರಾಗಬಹುದು ಎಂದು ಮೂಡಬಿದಿರೆ ಆಳ್ವಾಸ್ ಕಾಲೇಜಿನ ವಾಣಿಜ್ಯ ವಿಬಾಗದ ಡೀನ್ ಪ್ರಶಾಂತ್ ಕುಮಾರ್ ಎಂ.ಡಿ. ಹೇಳಿದರು.
ಅವರು ಕಾರ್ಕಳ ಶ್ರೀಭುವನೇಂದ್ರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಪ್ರಸಕ್ತ ವರುಷದ ಕಾರ್ಯಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ.ಮಂಜುನಾಥ್ ಎ.ಕೋಟ್ಯಾನ್ ಅವರು ವಹಿಸಿ ಮಾತನಾಡಿ, ಶ್ರದ್ಧೆ ಮತ್ತು ಪ್ರೀತಿ, ಪೂರ್ವಸಿದ್ಧತೆಯ ಗುಣಗಳು ವಿದ್ಯಾರ್ಥಿಗಳಲ್ಲಿ ಅಳವಡಿಕೆಯಾದರೆ ರಾಷ್ಟ್ರೀಯ ಸೇವಾಯೋಜನೆಗೆ ಸೇರಿದುದಕ್ಕೆ ಸಾರ್ಥಕವೆಂದರು.
ಸಮಾರಂಭದಲ್ಲಿ ರಾಷ್ಟ್ರೀಯ ಸೇವಾ ಯೋಜನ ಘಟಕದ ಅಧಿಕಾರಿಗಳಾದ ಶಂಕರ್ ಕುಡ್ವ ಹಾಗೂ ಶ್ರೀಮತಿ ಸುವರ್ಣಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕಾರ್ಯದರ್ಶಿಗಳಾದ ನಿತೇಶ್ ಸ್ವಾಗತಿಸಿ, ಭೂಮಿಕಾ ಕಾಮತ್ ವಂದಿಸಿದರು. ವಿಯೋಲ ಕಾರ್ಯಕ್ರಮ ನಿರೂಪಿಸಿದರು. ಶ್ರದ್ಧಾ ಹಾಗೂ ಅದಿತಿ ಕಾರಂತ್ ಎನ್.ಎಸ್.ಎಸ್ ಗೀತೆ ಹಾಗೂ ಏಕತಾ ಗೀತೆಗಳನ್ನು ಪ್ರಸ್ತುತಪಡಿಸಿದರು.