Share this news

ಕಾರ್ಕಳ : ಡಾ. ಬಿ.ಆರ್. ಅಂಬೇಡ್ಕರ್‌ರAತಹ ಅದ್ವಿತೀಯ ವ್ಯಕ್ತಿಗಳಿಂದ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿದ ಭಾರತಕ್ಕೆ ಸಂವಿಧಾನ ನೀಡಲು ಸಾಧ್ಯವಾಯಿತು. ಭಾರತದ ಆಂತರಿಕ ರಕ್ಷಣೆಯನ್ನು ಮಾಡುವ ಸಂವಿಧಾನ ಭಾರತಕ್ಕೊಂದು ವಿಶಿಷ್ಟ ಕೊಡುಗೆಯೆಂದರು. ಸಾಮಾಜಿಕ ಜಾಲತಾಣಗಳಿಂದ ಯುವಜನತೆಯ ಮೇಲೆ ಅಡ್ಡಪರಿಣಾಮವಾಗುವುದನ್ನು ತಪ್ಪಿಸುವುದು ಸುಲಭಸಾಧ್ಯ ವಿಚಾರವಲ್ಲ. ಅದರ ಪರಿಣಾಮಗಳಿಂದಾಗಿ ಅಪರಾಧಗಳು ಹೆಚ್ಚಾಗುತ್ತಿವೆ. ಸಾಂವಿಧಾನಿಕ ನೆಲೆಯಿಂದ ಪರಿಹರಿಸುವುದು ಅತೀಅಗತ್ಯವೆಂದು ಕಾರ್ಕಳದ ಖ್ಯಾತ ನ್ಯಾಯವಾದಿ ಸೂರಜ್ ಜೈನ್ ಹೇಳಿದರು.

ಅವರು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ರಾಷ್ಟಿçÃಯ ಸೇವಾ ಯೋಜನೆ ಹಾಗೂ ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ನಡೆದ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ನಡೆದ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ ಎ. ಕೋಟ್ಯಾನ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಧರ್ಮ ಹಾಗೂ ಧಾರ್ಮಿಕ ವಿವಾದಗಳು ಯುವ ಸಮುದಾಯದ ಮೇಲೆ ಪರಿಣಾಮ ಬೀರುತ್ತಿವೆ. ಇಂದಿನ ಯುವಜನತೆ ಸಮೇತ ನಾವುಗಳೆಲ್ಲರೂ ರಾಜಕೀಯದ ಗುಲಾಮರಾಗಿದ್ದೇವೆ. ಅದರಿಂದ ಹೊರಗೆ ಬಂದು ಸ್ವತಂತ್ರö ಚಿಂತಕರಾಗಿ ದೇಶದ ಕುರಿತು ಯೋಚಿಸುವಂತಾಗಬೇಕು ಎಂದರು.

ಸಂವಿಧಾನದ ಪೂರ್ವ ಪೀಠಿಕೆಯ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಸಮಾರಂಭದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ದತ್ತಾತ್ರೇಯ ಮಾರ್ಪಳ್ಳಿ, ರಾಷ್ಟಿçÃಯ ಸೇವಾಯೋಜನೆಯ ಅಧಿಕಾರಿಗಳಾದ ಶ್ರೀಮತಿ ಸುವರ್ಣಿಯವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇನ್ನೋರ್ವ ಯೋಜನಾಧಿಕಾರಿ ಶಂಕರ್ ಕುಡ್ವ ಸ್ವಾಗತಿಸಿದರು. ಮತದಾರ ಸಾಕ್ಷರತ ಕ್ಲಬ್ ನ ಕಾರ್ಯದರ್ಶಿ ಸುಮಾಲಿನಿ ಜೈನ್ ವಂದಿಸಿದರು. ಕಾರ್ಯಕ್ರಮವನ್ನು ವಿಯೋಲ ದ್ವಿತೀಯ ಬಿ.ಎ. ನಿರೂಪಿಸಿದರು.

Leave a Reply

Your email address will not be published. Required fields are marked *