Share this news

ಕಾರ್ಕಳ : ಸೋಲಿನಿಂದ ಧೃತಿಗೆಡದವರು, ನಿಷ್ಕಲ್ಮಶವಾಗಿ ಯೋಚಿಸುವವರು, ಸಕಾರಾತ್ಮಕ ದಾರಿಯಲ್ಲಿ ಮುನ್ನಡೆಯುವವರು ಯಾವತ್ತೂ ಬದುಕಿನಲ್ಲಿ ಸೋಲುವುದಿಲ್ಲ. ಮಾತ್ರವಲ್ಲ ನಾನೇನು ಮಾಡಲಾರೆ, ನಾನೇನಾದರೂ ಸಾಧಿಸಬಲ್ಲೆ, ಅತ್ತುö್ಯತ್ತಮವಾಗಿ ನಿರ್ವಹಿಸಬಲ್ಲೆ ಎಂಬAತಹವರಲ್ಲಿ ಮೂರನೆಯ ವರ್ಗದ ವ್ಯಕ್ತಿಗಳು ಜೀವನದಲ್ಲಿ ಸದಾ ಯಶಸ್ವಿಯಾಗುತ್ತಾರೆ. ಸುಳ್ಳು ಹೇಳುವ ಅಧಿಕಾರಿಗೆ ಸತ್ಯ ಹೇಳುವ ಗುಮಾಸ್ತನಿರಬೇಕಾಗುತ್ತದೆ. ಆದ್ದರಿಂದ ನಮ್ಮನ್ನು ನಾವೇ ಅರಿತು ಮುನ್ನಡೆಯಬೇಕು. ಸೋಲಿನಿಂದ ಮೇಲೆದ್ದು ಬರುವವರು ಮಾತ್ರ ಶ್ರೇಷ್ಠ ಸಾಧನೆ ಮಾಡಲು ಸಾಧ್ಯ ಎಂದು ತುಮಕೂರು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮೀ ವೀರೇಶಾನಂದ ಸರಸ್ವತಿಯವರು ಹೇಳಿದರು.

ಅವರು ಭುವನೇಂದ್ರ ಕಾಲೇಜಿನಲ್ಲಿ ಸ್ವಾಮೀ ವಿವೇಕಾಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಂಗಳೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮೀ ಜಿತಕಾಮಾನಂದಜೀ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ ತುಮಕೂರು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಯತಿವರೇಣ್ಯ ಪೂಜ್ಯ ಪರಮಾನಂದ ಸರಸ್ವತಿಯವರು ಭಾಗವಹಿಸಿದ್ದರು.
ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ ಎ. ಕೋಟ್ಯಾನ್ ಸ್ವಾಗತಿಸಿ, ಡಾ. ಮಂಜುನಾಥ ಭಟ್ ವಂದಿಸಿದರು. ಪ್ರಥಮ ಬಿ. ವಿದ್ಯಾರ್ಥಿನಿ ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *