Share this news

ಕಾರ್ಕಳ : ಪ್ರಾರಂಭದಲ್ಲಿ ಶ್ರೀ ಭುವನೇಂದ್ರ ಕಾಲೇಜಿನ ಆವರಣದಲ್ಲಿ ಸಂಸ್ಕೃತ ಕಾಲೇಜು ಇದ್ದು ಮುಂದೆ ಊರವರ ಮತ್ತು ಡಾ.ಟಿ.ಎಂ.ಎ.ಪೈ ಅವರ ದೂರದೃಷ್ಠಿಯಿಂದಾಗಿ ಆಧುನಿಕ ಶಿಕ್ಷಣಕ್ಕೆ ತೆರೆದುಕೊಂಡಿರುವುದು ಹೊಸತನಕ್ಕೆ ಹಾತೊರೆಯುವ ಉತ್ಸಾಹವೆಂಬುದರಲ್ಲಿ ಎರಡು ಮಾತಿಲ್ಲ. ಅಂತಹ ಹಿರಿಯರ ಅನುಭವದಿಂದಲಾಗಿ ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಸಂಸ್ಥೆ ಜಿಲ್ಲೆಯ ನಾನಾ ಕಡೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿತು. ಇದಕ್ಕೆಲ್ಲಾ ಕಾರಣ ಡಾ.ಟಿ.ಎಂ.ಎ.ಪೈಯವರು. ಉನ್ನತ ಶಿಕ್ಷಣಕ್ಕೆ ಭದ್ರಬುನಾದಿ ಹಾಕುವ ಮತ್ತು ಗ್ರಾಮೀಣ ಪ್ರದೇಶದ ಶಿಕ್ಷಣಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅವರು ಹಾಕಿಕೊಟ್ಟ ದಾರಿಯಲ್ಲಿ ಇಂದು ಕೂಡ ಆ ಸಂಸ್ಥೆ ಮುನ್ನಡೆಯುತ್ತಿದೆ.

ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಸಂಸ್ಥೆ ಎಲ್ಲಾ ಬಗೆಯ ಸಲಹೆ,ಸಹಾಯವನ್ನು ತನ್ನ ಶಿಕ್ಷಣ ಸಂಸ್ಥೆಗಳಿಗೆ ನೀಡುತ್ತಿದೆ. ಅದರ ಎಲ್ಲಾ ಅನುಕೂಲಗಳನ್ನು ಪಡೆದುಕೊಂಡು ಅಭಿವೃದ್ಧಿಯ ದಾಪುಗಾಲು ಇಡುವ ಸಂಸ್ಥೆಯೆAದರೆ ಶ್ರೀ ಭುವನೇಂದ್ರ ಕಾಲೇಜು. ಇಂದು ಶ್ರೀ ಭುವನೇಂದ್ರ ಕಾಲೇಜು ತನ್ನ ಸರ್ವಾಂಗೀಣ ಸಾಧನೆಯ ಫಲವಾಗಿ ಎಲ್ಲರ ಮನವನ್ನು ಗೆದ್ದಿದೆ ಮಾತ್ರವಲ್ಲ ಗುಣಮಟ್ಟದ ಶಿಕ್ಷಣದಿಂದಲಾಗಿ ಅತ್ಯುತ್ತಮ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡಮಾಡಿರುವುದು ನಮಗೆಲ್ಲರಿಗೂ ಸಂತೋಷದ ಸಂಗತಿ ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ ವಿಶ್ವವಿದ್ಯಾಲಯ ಇಲ್ಲಿನ ಸಹ ಕುಲಾಧಿಪತಿ ಲೆಪ್ಟಿನೆಂಟ್ ಜನರಲ್ ಡಾ. ಎಂ.ಡಿ. ವೆಂಕಟೇಶ್ ಅವರು ಹೇಳಿದರು.

ಅವರು ಶ್ರೀ ಭುವನೇಂದ್ರ ಕಾಲೇಜಿನ ಸಂಸ್ಥಾಪಕರ ದಿನಾಚರಣೆ ಮತ್ತು ಕಾಲೇಜು ವಾರ್ಷಿಕೋತ್ಸವದ ಮುಖ್ಯ ಅತಿಥಿಗಳಾಗಿ ಮಾತನಾಡಿ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದವಕಾಲೇಜಿನ ಆಡಳಿತಮಂಡಳಿಯ ಸಿ ಎ ಶಿವಾನಂದ ಪೈ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯ ಹಂತದಲ್ಲಿ ಅತ್ಯುತ್ತಮ ಸಂಸ್ಕಾರವನ್ನು ರೂಪಿಸಿಕೊಂಡು ಬದುಕನ್ನು ಹಸನು ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳು, ಪದವಿಪೂರ್ವ ಕಾಲೇಜಿನ ಅತೀ ಉನ್ನತ ಶ್ರೇಣಿಯ ವಿದ್ಯಾರ್ಥಿಗಳು ಹಾಗೂ ರಾಷ್ಟಿçÃಯ, ಅಂತಾರಾಷ್ಟಿçÃಯ ಮಟ್ಟದಲ್ಲಿ ಕೀರ್ತಿಯನ್ನು ತಂದಿತ್ತ ಕ್ರೀಡಾಳುಗಳನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು.


ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಪ್ರೊ ದತ್ತಾತ್ರೇಯ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಎ. ಕೋಟ್ಯಾನ್ ಸ್ವಾಗತಿಸಿದರು. ಶ್ರೀ ಭುವನೇಂದ್ರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ರಮೇಶ್ ಎಸ್.ಸಿ. ವಂದಿಸಿದರು. ವ್ಯವಹಾರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ನಂದಕಿಶೋರ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *