ಕಾರ್ಕಳ:ಮಧ್ಯಾಹ್ನದ ಬಳಿಕ ಕಾರ್ಕಳ ತಾಲೂಕಿನಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಧ್ಯಾಹ್ನ 3 ಗಂಟೆ ವೇಳೆಗೆ 62.20% ಮತದಾನವಾಗಿದೆ. ಬಿರುಬಿಸಿಲಿನ ತೀವೃತೆಗೆ ಜನರು ಮತಗಟ್ಟೆಗೆ ಬರಲು ಹಿಂದೇಟು ಹಾಕುತ್ತಿರುವ ಕಾರಣದಿಂದ ಶೇಕಡಾವಾರು ಮತದಾನದಲ್ಲಿ ಕುಸಿತವಾಗಿರುವ ಸಾಧ್ಯತೆಯಿದ್ದು ಸಂಜೆ 4ರಿಂದ ಮತದಾನ ಮತ್ತೆ ಚುರುಕುಪಡೆಯುವ ಸಾಧ್ಯತೆಗಳಿವೆ.
11 ಗಂಟೆಯ ಸುಮಾರಿಗೆ 33% ಮತದಾನವಾಗಿದೆ. ಆದರೆ ಮಧ್ಯಾಹ್ನದ ಬಳಿಕ ಶೇಕಡಾವಾರು ಮತದಾನ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿದೆ. 3 ಗಂಟೆ ವೇಳೆಗೆ 1,18,542 ಮತ ಚಲಾವಣೆಯಾಗಿದ್ದು, ಚಲಾವಣೆಗೊಂಡ ಮತಗಳ ಪೈಕಿ 61660 ಮಹಿಳಾ ಮತದಾರರು ಮಚಲಾಯಿಸಿದರೆ 56882 ಪುರುಷರು ಹಕ್ಕು ಚಲಾಯಿಸುವ ಮೂಲಕ ಕಾರ್ಕಳ ಕ್ಷೇತ್ರದಲ್ಲಿ 62.20% ಮತದಾನವಾಗಿದೆ.