Share this news

ಕಾರ್ಕಳ: ಆಧುನಿಕ ಶಿಕ್ಷಣ ಪದ್ದತಿಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಪರೀಕ್ಷೆಯಲ್ಲಿ ಅಂಕ ಗಳಿಸುವತ್ತ ಮಾತ್ರವೇ ಮಕ್ಕಳನ್ನು ಜೀವನದ ಪರೀಕ್ಷೆಯನ್ನು ಎದುರಿಸುವಲ್ಲಿ ಮೌಲ್ಯಾಧಾರಿತ ಶಿಕ್ಷಣದ ಕೊರತೆಯಿದೆ ಎಂದು ಖ್ಯಾತ ವಿದ್ವಾಂಸ ಹಾಗೂ ಶಿಕ್ಷಕ ವಿಠಲ್ ನಾಯಕ್ ಹೇಳಿದರು.

ಅವರು ಜೋಡುರಸ್ತೆ ಕುಲಾಲ ಸಭಾಭವನದಲ್ಲಿ ನ.5 ರಂದು ಭಾನುವಾರ ನಡೆದ ಹೆಬ್ರಿ ಮತ್ತು ಕಾರ್ಕಳ ತಾಲೂಕು ಮರಾಠಿ ಸಮಾಜ ಸೇವಾ ಸಂಘದ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ, ಮಕ್ಕಳ ಚಿತ್ರಕಲಾ ಸ್ಪರ್ಧೆ, ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಂಗವಾಗಿ ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿ, ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಅವರನ್ನೇ ಆಸ್ತಿಯನ್ನಾಗಿ ಮಾಡಿ ಆಗ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದರು.

ಸಂಘದ ಅಧ್ಯಕ್ಷ ಶೇಖರ ಕಡ್ತಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮುದಾಯದ ಅಭಿವೃದ್ದಿಗೆ ಸಂಘಟನೆಯ ಅಗತ್ಯತೆಯಿದೆ, ಮರಾಠಿ ಸಮುದಾಯವು ಇಂದು ಶಿಕ್ಷಣ, ಉದ್ಯಮ, ವೃತ್ತಿ ಬದುಕಿನಲ್ಲಿ ಮುಂಚೂಣಿಯಲ್ಲಿದೆ.ಮಕ್ಕಳಿಗೆ ಸಂಘಟನೆಯ ಮಹತ್ವದ ಜತೆಗೆ ಸಮಾಜದ ಉತ್ತಮ ನಾಗರಿಕರನ್ನಾಗಿ ರೂಪಿಸುವ ಹೊಣೆಗಾರಿಕೆ ಪೋಷಕರದ್ದಾಗಿದೆ ಎಂದರು.
ಮುಖ್ಯ ಅತಿಗಳಾಗಿ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ನ ನಿವೃತ್ತ ಪ್ರಾದೇಶಿಕ ನಿರ್ದೇಶಕ ವಿ.ಪಿ ನಾಯ್ಕ್,ಮಂಗಳೂರು, ಉಡುಪಿ ಜಿಲ್ಲಾ ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಉಮೇಶ್ ನಾಯ್ಕ್, ಮುಂಬಯಿ ಉದ್ಯಮಿ ಸುಧಾಕರ ನಾಯ್ಕ್, ರೈಲ್ವೇ ಇಲಾಖೆಯ ನಿವೃತ್ತ ಉದ್ಯೋಗಿ ವಿ.ಸುಧಾಕರ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು


ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ವಿ.ಸುಧಾಕರ ನಾಯ್ಕ್, ಪ್ರಧಾನ ಕಾರ್ಯದರ್ಶಿ ಹರೀಶ್ ಇರ್ವತ್ತೂರು, ಕೋಶಾಧಿಕಾರಿ ಶ್ರೀನಿವಾಸ ನಾಯ್ಕ್, ಜತೆ ಕಾರ್ಯದರ್ಶಿ ಅಶೋಕ್ ನಾಯ್ಕ್, ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿ ಪವನ್ ನಾಯ್ಕ್, ಸಂಘಟನಾ ಕಾರ್ಯದರ್ಶಿ ಅಶೋಕ್ ನಾಯ್ಕ್, ಯುವ ವೇದಿಕೆ ಅಧ್ಯಕ್ಷ ನಾಗೇಂದ್ರ ಹೆಬ್ರಿ, ಮಹಿಳಾ ವೇದಿಕೆ ಅಧ್ಯಕ್ಷೆ ಶಶಿಕಲಾ ಮುಂತಾದವರು ಹಾಜರಿದ್ದರು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಇರ್ವತ್ತೂರು ಪ್ರಸ್ತಾವನೆಗೈದರು.
ಸುಗಂಧಿ ನಾಯ್ಕ್ ಶಿವಪುರ ಸ್ವಾಗತಿಸಿ,ಅಶೋಕ್ ನಾಯ್ಕ್ ಕುಕ್ಕುಜೆ ವಂದಿಸಿದರು. ಪದ್ಮಾಕರ್ ನಾಯ್ಕ್, ರೇವತಿ ದುರ್ಗ ಕಾರ್ಯಕ್ರಮ ನಿರೂಪಿಸಿದರು.
ರಾಜೇಶ್ವರಿ ಸನ್ಮಾನ ಪತ್ರ ವಾಚಿಸಿದರು.

 

 

 

 

 

 

 

 

Leave a Reply

Your email address will not be published. Required fields are marked *