ಕಾರ್ಕಳ: ಸರಕಾರ ಉಚಿತ ಗ್ಯಾರಂಟಿ ಯೋಜನೆಯಲ್ಲಿ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವುದಾಗಿ ಘೋಷಿಸಿದೆ. ಆದರೆ ಕಾರ್ಕಳ ತಾಲೂಕಿನಲ್ಲಿ ಬೆರಳೆಣಿಕೆಯ ಸರಕಾರಿ ಬಸ್ಸುಗಳು ಮಾತ್ರ ಸಂಚರಿಸುತ್ತವೆ. ಆದ್ದರಿಂದ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗಾಗಿ ಹೆಚ್ಚುವರಿ ಬಸ್‌ಗಳು ಸಂಚರಿಸಬೇಕು ಎಂದು ಜೆಡಿಎಸ್ ವತಿಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಅಲ್ಲದೆ ಕರಾವಳಿ ಭಾಗದ ಜನರು ಕುಚ್ಚಲಕ್ಕಿ ಉಪಯೋಗಿಸುವ ಕಾರಣ ಅನ್ನಭಾಗ್ಯ ಯೋಜನೆಯಲ್ಲಿ ಕುಚ್ಚಲಕ್ಕಿಯನ್ನು ವಿತರಿಸಬೇಕೆಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಕಳ ಜೆಡಿಎಸ್ ಅಧ್ಯಕ್ಷ ಶ್ರೀಕಾಂತ್ ಕುಚ್ಚೂರು,ಪ್ರಧಾನ ಕಾರ್ಯದರ್ಶಿ ಸುರೇಶ್ ದೇವಾಡಿಗ ಬಜಗೋಳಿ, ಸಂಘಟನೆ ಕಾರ್ಯದರ್ಶಿ ಸೈಯದ್ ಹರ್ಷದ್ ಉಪಸ್ಥಿತರಿದ್ದರು.