ಕಾರ್ಕಳ : ತಾಲೂಕಿನ ಬೋಳ ಗ್ರಾಮದ ಕೆರೆಕೋಡಿ ನಿವಾಸಿ ಶೋಭಾ (40ವ) ಎಂಬವರು ಕಳೆದ ಹಲವು ವರ್ಷಗಳಿಂದ ಮಾನಸಿಕ ಅಸ್ವಸ್ಥತೆ ಹಾಗೂ ಬುದ್ಧಿಮಾಂದ್ಯತೆಯಿAದ ಬಳಲುತ್ತಿದ್ದು, ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಎ.10 ರಂದು ರಾತ್ರಿ ಊಟ ಮುಗಿಸಿದ ಶೋಭಾ ತನ್ನ ಖಾಯಿಲೆಗೆ ವೈದ್ಯರು ನೀಡಿದ್ದ ಎಲ್ಲಾ ಮಾತ್ರೆಗಳನ್ನು ಒಟ್ಟಿಗೆ ಸೇವಿಸಿ ಅಸ್ವಸ್ಥಗೊಂಡಿದ್ದರು. ಅವರನ್ನು ಎ.11 ರ ಬೆಳಿಗ್ಗೆ 9.30ರ ವೇಳೆಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆ ವೇಳೆಗಾಗಲೇ ಶೋಭಾ ಮೃತಪಟ್ಟಿದ್ದರು.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ