Share this news

ಕಾರ್ಕಳ: ಮಿಯ್ಯಾರು ಗ್ರಾಮದ ಕುಂಟಿಬೈಲು ಸಮಾಜ ಮಂದಿರದಲ್ಲಿನ ಮತಗಟ್ಟೆಯಲ್ಲಿ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮತದಾನಕ್ಕೆ ಅಡಚಣೆಯಾದ ಘಟನೆ ನಡೆಯಿತು.

ಬೆಳಗ್ಗೆ ಸಿಬ್ಬಂದಿಗಳು ಅಣಕು ಮತದಾನ ನಡೆಸಿ ಮತದಾನ ಆರಂಭಿಸುವ ಸಂದರ್ಭದಲ್ಲಿ ಮತಯಂತ್ರದಲ್ಲಿ ತಾಂತ್ರಿಕದೋಷ ಕಾಣಿಸಿಕೊಂಡಿತ್ತು. ತಕ್ಷಣವೇ ಅಧಿಕಾರಿಗಳು ಬದಲಿ ಮತಯಂತ್ರ ವ್ಯವಸ್ಥೆ ಮಾಡಿದರೂ ಸುಮಾರು 1 ಗಂಟೆಗಳಷ್ಟು ಕಾಲ ಮತದಾನ ಪ್ರಕ್ರಿಯೆ ವಿಳಂಬವಾಯಿತು.ಇದರಿAದ ಮತದಾನ ಮಾಡಿ ಕೆಲಸಕ್ಕೆ ಹೋಗಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದ ಮತದಾರರು ಕಾದುಕಾದು ಬಳಿಕ ಮತಚಲಾಯಿಸದೇ ನಿರಾಶೆಯಿಂದ ತೆರಳಿದ್ದಾರೆ ಎಂದು ವರದಿಯಾಗಿದೆ

Leave a Reply

Your email address will not be published. Required fields are marked *