ಕಾರ್ಕಳ : ಕಾರ್ಕಳ ಮೈನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಯೋ ನಿವೃತ್ತಿ ಹೊಂದಿರುವ ಹಿರಿಯ ಸಹ ಶಿಕ್ಷಕಿ ಗ್ರೇಸ್ ವಜ್ರಾವತಿ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ನಿವೃತ್ತ ಶಿಕ್ಷಕಿ ಗ್ರೇಸ್ ವಜ್ರಾವತಿ ಮತ್ತು ಅವರ ಪತಿ ಹರ್ಷವರ್ಧನ್ ಪಿ ಕುಮಾರ್ ಅವರನ್ನು ಬೆಹರೈನ್ ಕುವೈಟ್ ಇನ್ಸೂರೆನ್ಸ್ ಕಂಪನಿಯ ನಿವೃತ್ತ ಚಾರ್ಟರ್ಡ್ ಅಕೌಂಟೆಂಟ್ ಹಾಗೂ ಶಾಲೆಯ ಹಳೆ ವಿದ್ಯಾರ್ಥಿ ಕಾರ್ಕಳ ಕಮಲಾಕ್ಷ ಕಾಮತ್ ಸನ್ಮಾನಿಸಿ ಅಭಿನಂದಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಪದವೀಧರ ಸಹ ಶಿಕ್ಷಕಿ ಪ್ರತಿಮಾ ದೇವದಾಸ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಜ್ಯೋತಿ ನಾಯಕ್, ಉಮೇಶ್, ದಾನಿ ಊರ್ಮಿಳಾ ಶಿಂಧೆ, ನಿವೃತ್ತಿ ಹೊಂದುತ್ತಿರುವ ಶಿಕ್ಷಕಿಯ ಸುಪುತ್ರಿ ಕು.ಆನೆಟ್ ಶ್ರೇಯಾ ಉಪಸ್ಥಿತರಿದ್ದರು.
ಶಾಲಾ ಶಿಕ್ಷಕಿ ಶಶಿಕಲಾ ಸ್ವಾಗತಿಸಿದರು. ಶ್ರೀಮತಿ ಮಧುಶ್ರೀ ಅಭಿನಂದನಾ ಪತ್ರ ವಾಚಿಸಿದರು. ಕು. ಅಶ್ವಿನಿ ವಂದಿಸಿ,ಕು. ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು.