ಕಾರ್ಕಳ: ಕಾರ್ಕಳ ಪುರಸಭಾ ವ್ಯಾಪ್ತಿಯ ರಾಮಸಮುದ್ರದಲ್ಲಿ ಸ್ನಾನಕೆಂದು ಹೋಗಿದ್ದ ವೃದ್ದರೋರ್ವರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ಕಾರ್ಕಳ ತಾಲೂಕಿನ ಬೋಳ ಗ್ರಾಮದ ವಂಜಾರಕಟ್ಟೆ ನಿವಾಸಿ ದೇವಪ್ಪ ಪೂಜಾರಿ(70) ಎಂಬವರು ಮೃತಪಟ್ಟವರು.
ದೇವಪ್ಪ ಪೂಜಾರಿಯವರು ವಿಪರೀತ ರಕ್ತದೊತ್ತಡ ಹಾಗೂ ಮಧುಮೇಹ ಖಾಯಿಲೆಯಿಂದ ಬಳಲುತ್ತಿದ್ದು ಆರೋಗ್ಯ ತಪಾಸಣೆಗೆಂದು ಬುಧವಾರ ಬೆಳಗ್ಗೆ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಬಂದವರು ಬಳಿಕ ಮಧ್ಯಾಹ್ನ ರಾಮಸಮುದ್ರದ ಸ್ನಾನಕೆಂದು ತೆರಳಿದ್ದರು. ಈ ವೇಳೆ ಆರೋಗ್ಯದಲ್ಲಿ ಏರುಪೇರಾಗಿ ದೇವಪ್ಪ ಪೂಜಾರಿ ಅವರು ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದರು. ತಕ್ಷಣವೇ ಸ್ಥಳೀಯರು ಅವರನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ
