ಕಾರ್ಕಳ: ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 169ರ ಸಾಣೂರಿನಿಂದ ಮಂಗಳೂರಿನ ಕುಲಶೇಖರ ವರೆಗಿನ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ.ಕಾಮಗಾರಿ ಪ್ರಾರಂಭದಿAದಲೇ ಪರಿಹಾರ ನೀಡಲು ಜಿಗುಟುತನ ತೋರಿಸಿದ ಹೆದ್ದಾರಿ ಇಲಾಖೆ, ಹೈಕೋರ್ಟ್ ಪರಿಷ್ಕೃತ ದರವನ್ನು ಭೂ ಮಾಲೀಕರಿಗೆ ನೀಡುವಂತೆ ತಿಳಿಸಿದ್ದರೂ ಪರಿಹಾರ ನೀಡಲು ಕುಂಟುನೆಪ ತೋರಿಸುತ್ತಿದೆ.ಪರಿಹಾರ ನೀಡಲು ಪರಿಷ್ಕೃತ ಪಟ್ಟಿಯನ್ನು ಅನುಮೋದನೆಗಾಗಿ ದೆಹಲಿಗೆ ಕಳಿಸಲಾಗಿದೆ ಎಂದು ಸ್ಥಳೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ. ಇದನ್ನೆಲ್ಲಾ ಗಮನಿಸಿದಾಗ ಹೆದ್ಸಾರಿ ಪ್ರಾಧಿಕಾರದ ಬಳಿ ಪರಿಹಾರ ನೀಡಲು ಹಣವಿಲ್ಲವೇ ಎನ್ನುವ ಅನುಮಾನ ಮೂಡಿದೆ ಎಂದು ರಾಷ್ಟ್ರೀಯ ಹೆದ್ದಾರಿ ಭೂಸಂತ್ರಸ್ತರ ಹೋರಾಟ ಸಮಿತಿ ಸದಸ್ಯ ಸಾಣೂರು ನರಸಿಂಹ ಕಾಮತ್ ಪ್ರಶ್ನಿಸಿದ್ದಾರೆ.
2020ರಲ್ಲಿ ತಯಾರಿಸಿದ ಅಂದಾಜು ಪಟ್ಟಿ ಕೇವಲ ರೂ.485 ಕೋಟಿಯದ್ದಾಗಿತ್ತು ಈಗ ಕೋರ್ಟು ನಿರ್ದೇಶನದಂತೆ ಪರಿಹಾರ ನೀಡುವುದಾದರೆ ತಮಗೆ ಸುಮಾರು ರೂ.1216ಕೋಟಿ ಬೇಕಾಗುತ್ತದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪರಿಷ್ಕೃತ ಪಟ್ಟಿ ತಯಾರಿಸಿದ್ದಾರೆ.ಸಾಣೂರು ಪಡುಮಾರ್ನಾಡು ಮತ್ತು ಪುತ್ತಿಗೆ ಗ್ರಾಮಗಳ ಪರಿಹಾರವನ್ನು ನೀಡುವಂತೆ ಉಚ್ಚ ನ್ಯಾಯಾಲಯ ತೀರ್ಪು ನೀಡಿ ಸುಮಾರು ಮೂರು ತಿಂಗಳು ಈಗಾಗಲೇ ಕಳೆದು ಹೋಗಿದೆ. ಇಲಾಖೆಯಲ್ಲಿ ವಿಚಾರಿಸಿದರೆ ಕೇಂದ್ರದಿAದ ಹಣ ಬಂದಿರುವುದಿಲ್ಲ ಎಂದು ತಿಳಿಸುತ್ತಿದ್ದಾರೆ.ಇನ್ನುಳಿದಂತೆ ತೆಂಕಮಿಜಾರು, ತೆಂಕ ಎಡಪದವು, ಬಡಗ ಎಡಪದವು, ತೆಂಕ ಉಳಿಪಾಡಿ, ತಿರುವೈಲು ಮತ್ತು ಕುಡುಪು ಗ್ರಾಮಗಳ ಭೂ ಮಾಲೀಕರಿಗೆ ಕೂಡ ಪರಿಹಾರವನ್ನು ಪರಿಷ್ಕರಿಸಿ ಕೊಡಬೇಕೆಂದು ಮಾನ್ಯ ಜಿಲ್ಲಾಧಿಕಾರಿಯವರು ತೀರ್ಪನ್ನು ನೀಡಿ ಈಗಾಗಲೇ ಒಂದು ತಿಂಗಳು ಕಳೆದಿದ್ದರೂ ಇನ್ನೂ ಪರಿಹಾರ ವಿತರಣೆಯಾಗಿಲ್ಲ ಎಂದಿದ್ದಾರೆ
ಸAಸದರು ಇತ್ತೀಚೆಗೆ ಹೆದ್ದಾರಿ ಅಭಿವೃದ್ಧಿಯ ಕೆಲಸದ ವೀಕ್ಷಣೆ ಮಾಡಿ ಈಗಾಗಲೇ 22 ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗಿದೆ ಎನ್ನುವ ತಪ್ಪು ಮಾಹಿತಿಯನ್ನು ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ನೀಡಿದ್ದು 2024ರ ಡಿಸೆಂಬರ್ ನಲ್ಲಿ ಈ ರಸ್ತೆಯ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿಕೆ ನೀಡಿದ್ದು ಇವರ ಪ್ರಕಾರ ಇನ್ನುಳಿದ ಕೇವಲ 23 ಕಿ.ಮೀ ರಸ್ತೆಗೆ ಮತ್ತೆ ಒಂದೂವರೆ ವರ್ಷದ ಸಮಯ ಬೇಕೇ ಎನ್ನುವುದು ಜನಸಾಮಾನ್ಯರಲ್ಲಿ ಪ್ರಶ್ನೆ ಮೂಡಿದೆ ಎಂದು ನರಸಿಂಹ ಕಾಮತ್ ಹೇಳಿದ್ದಾರೆ