Share this news

ಕಾರ್ಕಳ: ರೋಟರಿ ಕ್ಲಬ್ ಕಾರ್ಕಳ ಇವರ ಸಹಭಾಗಿತ್ವದಲ್ಲಿ ಸಂಸ್ಥೆಯ ವಜ್ರಮಹೋತ್ಸವದ ಪ್ರಯುಕ್ತ ದೀಪಾವಳಿ ಗೂಡುದೀಪ ಸ್ಪರ್ಧೆಯು ನ.19 ರಂದು ಸಂಜೆ ರೋಟರಿ ಬಾಲ ಭವನದಲ್ಲಿ ನಡೆಯಿತು.
ಮಂಗಳೂರು, ಉಡುಪಿ, ಮತ್ತು ಕಾರ್ಕಳದ ಸ್ಪರ್ಧಿಗಳು ಆಕರ್ಷಕ ಗೂಡುದೀಪಗಳೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

 

ಫಲಿತಾಂಶದ ವಿವರಗಳು

ಆಧುನಿಕ ವಿಭಾಗದಲ್ಲಿ ಗಿಜಿಗಿಜಿ ಕಾಯಿಯಿಂದ ವಿಠಲ್ ಭಟ್ ರಥಬೀದಿ ಮಂಗಳೂರು ಇವರು ತಯಾರಿಸಿದ ಗೂಡುದೀಪ ಪ್ರಥಮ, 40 ಬಗೆಯ ಹಣ್ಣು ಹಂಪಲಿನ ಬೀಜಗಳಿಂದ ಜಗದೀಶ್ ಅಮೀನ್ ಸುಂಕದ ಕಟ್ಟೆ ತಯಾರಿಸಿದ ಗೂಡುದೀಪ ದ್ವಿತೀಯ, ಬಾಳೆ ಗಿಡದಿಂದ ರಾಜೇಶ್ ಚಿಲಿಂಬಿಯವರು ತಯಾರಿಸಿದ ಗೂಡುದೀಪ ತೃತೀಯ ಸ್ಥಾನವನ್ನು ಪಡೆಯಿತು.

ಸಾಂಪ್ರದಾಯಿಕ ವಿಭಾಗದಲ್ಲಿ ಆದಿತ್ಯ ಭಟ್ ಗುರುಪುರ ಪ್ರಥಮ, ರಕ್ಷಿತ್ ಕುಮಾರ್ ದ್ವಿತೀಯ, ಉಮೇಶ್ ಕಾವೂರು ತೃತೀಯ ಸ್ಥಾನವನ್ನು ಪಡೆದರು.

ಕಾರ್ಕಳದ ಪ್ರತೇಕ ಸ್ಪರ್ಧೆಯಲ್ಲಿ ಚೇತನ್ ರಾವ್ ಪ್ರಥಮ, ರಾಜೇಶ್ ನಕ್ರೆ ದ್ವಿತೀಯ, ನಾಗೇಶ್ ಹೆಗ್ಡೆ ತೃತೀಯ ಸ್ಥಾನವನ್ನು ಪೆಡೆದರು.
ವಿನುತ ವಿನೀತ್,ಕೀರ್ತಿ ಪೂಜಾರಿ, ಅಮೃತ್ ರಾವ್ ಹಾಗೂ ಟೀಂ ಬ್ಲಾಕ್ ಸ್ಪೆಕ್ಟರ್ ಸಮಾಧಾನಕರ ಬಹುಮಾನ ಪಡೆದರೆ, ದ್ರುವ ಕಾಮತ್ ವಿಶೇಷ ಪ್ರೋತ್ಸಾಹಕ ಬಹುಮಾನ, ವಿದ್ಯಾರ್ಥಿಗಳಾದ ಶೃಜನ್ ಕಾಮತ್, ಸುಜಯ ಕಾಮತ್,ಯಶ್ವಿತಾ ಹಾಗೂ ಸಾನ್ವಿ ಪ್ರೋತ್ಸಾಹಕ ಬಹುಮಾನವನ್ನು ಪಡೆದರು.
ವಿಜೇತರಿಗೆ ಚಿನ್ನದ ಪದಕ

ಸಮಾರೋಪ ಸಮಾರಂಭದಲ್ಲಿ ರೋಟರಿ ಕ್ಲಬ್ ಅದ್ಯಕ್ಷ ಜಾನ್ ಆರ್ ಡಿ ಸಿಲ್ವ, ವಜ್ರಮಹೋತ್ಸವ ಸಮಿತಿಯ ಅದ್ಯಕ್ಷ ತುಕಾರಾಮ್ ನಾಯಕ್, ಯೋಗೀಶ್ ಪ್ರಭು, ಬಾಲಾಜಿ ಪ್ರಶಾಂತ್ ಶೆಣೈ, ನವೀನ್ ರಾವ್ ವಿಜೇತರಿಗೆ ಚಿನ್ನದ ಪದಕ, ನಗದು, ಪ್ರಶಸ್ತಿ ಪತ್ರ ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಶಂಸನಾ ಪತ್ರ ಮತ್ತು ಗೌರವಾರ್ಪಣೆ ಮಾಡಲಾಯಿತು. ಅಯೋಜಕ ಶುಭದರಾವ್ ವಿಜೇತರ ವಿವರಗಳನ್ನು ನೀಡಿದರು. ನಿವೃತ್ತ ಶಿಕ್ಷಕ ವಸಂತ ಎಂ, ಕಾರ್ಯಕ್ರಮವನ್ನು ನಿರೂಪಿಸಿ ಇಕ್ಬಾಲ್ ಅಹಮ್ಮದ್ ವಂದಿಸಿದರು.

 

Leave a Reply

Your email address will not be published. Required fields are marked *