ಕಾರ್ಕಳ: ಕಾರ್ಕಳ ರೋಟರಿ ರಾಕ್ ಸಿಟಿ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಕಾರ್ಕಳ ತಾಲೂಕಿನ ಗ್ರಾಮ ಪಂಚಾಯತ್ ಎಸ್ ಎಲ್ ಆರ್ ಘಟಕದಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತರನ್ನು ಅಭಿನಂದಿಸಲಾಯಿತು.
ಮುAಡ್ಕೂರು ಗ್ರಾಮ ಪಂಚಾಯತ್ ಮೇಲ್ವಿಚಾರಕಿ ಉಷಾ ಎಸ್., ಮಿಯ್ಯಾರು ಗ್ರಾಮ ಪಂಚಾಯತ್ ಮೇಲ್ವಿಚಾರಕಿ ಲಲಿತ, ಸ್ವಚ್ಛ ವಾಹಿನಿ ಚಾಲಕಿ ಯಶೋಧ, ನಂದಳಿಕೆ ಗ್ರಾಮ ಪಂಚಾಯತ್, ಮುಡಾರು ಗ್ರಾಮ ಸಹಾಯಕ ಸಚಿನ್ ಹಾಗೂ ನೀರೆ ಗ್ರಾಮ ಪಂಚಾಯತ್ ಸಹಾಯಕಿ ಅಮ್ಮಣಿ ಇವರನ್ನು ಗೌರವವಿಸಲಾಯಿತು.
ರೊಟೇರಿಯನ್ ಹಾಗೂ ಜಿಲ್ಲಾ ಎಸ್ ಎಲ್ ಎಮ್ ಕಾರ್ಯಕರ್ತರ ಒಕ್ಕೂಟದ ಅಧ್ಯಕ್ಷರಾದ ಮಾಧವಿ. ಕೆ ಪ್ರಾಸ್ತವಿಕವಾಗಿ ಮಾತಾಡಿದರು
ಈ ಸಂದರ್ಭದಲ್ಲಿ ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಂಯೋಜಕರದ ರಘುನಾಥ್, ರೋಟರಿ ಅಧ್ಯಕ್ಷರಾದ ಸುರೇಶ್ ನಾಯಕ್, ಕಾರ್ಯದರ್ಶಿ ಉಪೇಂದ್ರ ವಾಗ್ಳೆ ಕಾರ್ಯಕ್ರಮದ ಪ್ರಾಯೋಜಕರಾದ ಖ್ಯಾತ ವೈದ್ಯರಾದ ಡಿಜಿಪಿ ಜಡಿ ಭಾರತೇಶ್ ಉಪಸ್ಥಿತರಿದ್ದರು.