Share this news

ಕಾರ್ಕಳ: ಬೆಂಗಳೂರು ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ನ ರಾಜ್ಯಾಧ್ಯಕ್ಷರಾಗಿ ಪ್ರಸ್ತುತ ಗೌರ್ನಿಂಗ್ ಕೌನ್ಸಿಂಲ್ ಚೇರ್ಮೆನ್ ಆಗಿ ಸಮಾಜಕ್ಕಾಗಿ ದುಡಿದ ಹಿರಿಯರಾದ ವಿ.ಎ.ರಾಣೋಜಿ ರಾವ್ ಸಾಠೆಯವರ ನಿಧನದ ಗೌರವಾರ್ಥ ಉಡುಪಿ ಜಿಲ್ಲೆಯ ವತಿಯಿಂದ ಸಂತಾಪ ಸಭೆಯು ಕಾರ್ಕಳದ ಕಾಳಿಕಾಂಬಾ ಶ್ರೀ ದುರ್ಗಾಮಾತಾ ನಿವಾಸದಲ್ಲಿ ಜರಗಿತು.

ಉಡುಪಿ ಜಿಲ್ಲಾಧ್ಯಕ್ಷರಾದ ಪ್ರಕಾಶ್ ರಾವ್ ಮಾತನಾಡಿ,ಮರಾಠ ಸಮಾಜದ ಬಂಧುಗಳ ಏಳಿಗೆಗೆ ಅವಿರತ ಶ್ರಮ, ಸಮಾಜದ ಬಗ್ಗೆ ಕಾಳಜಿ, ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಅವರಲ್ಲಿ ಇರುವ ಏಕತೆ ಹಾಗೂ ರಾಜ್ಯದಲ್ಲಿ ಮರಾಠ ನಿಗಮ ಸ್ಥಾಪನೆಗೆ ಇದ್ದ ಕಾಳಜಿ, ಹೋರಾಟ ಅಪಾರವಾದದ್ದು. ಮರಾಠ ಪರಿಷತ್ ನಲ್ಲಿ ನಡೆಯುವ ಮಾಸಿಕ ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯುವಕರಿಗೆ ಮಾರ್ಗದರ್ಶನ ನೀಡುವ ಸಂದೇಶ ನೆನಪಿಗೆ ಬರುತ್ತದೆ. ನಮ್ಮನು ಆಗಲಿದ ದಿವ್ಯ ಆತ್ಮಕ್ಕೆ ಚಿರ ಶಾಂತಿಯನ್ನು ದೇವರು ಕರುಣಿಸಲಿ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಸಂತೋಷ್ ರಾವ್ ಕವಡೆ , ಕಾರ್ಕಳ ತಾಲೂಕು ಘಟಕದ ಕಾರ್ಯದರ್ಶಿ ಹರೀಶ್ ರಾವ್ ಅಸ್ವಾಲ್ , ಕೋಶಾಧಿಕಾರಿ ಸತೀಶ್ ರಾವ್ ಪವಾರ್ , ಸಂತೋಷ್ ರಾವ್ ಲಾಡ್,ಹರಿಶ್ಚಂದ್ರ ರಾವ್ ಮೋರೆ, ದಿನೇಶ್ ರಾವ್, ನಾಗೇಶ್ ರಾವ್ ,ಸುಧೀರ್ ರಾವ್, ತಾರಾನಾಥ್ ಲಾಡ್, ರೋಹಿತ್ ರಾವ್, ರಾಘವೇಂದ್ರ ರಾವ್, ರಾಜೇಶ್ ರಾವ್ ಹಾಗೂ ಸಮಾಜದ ಬಂಧುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *