ಕಾರ್ಕಳ : ಹಿರಿಯಂಗಡಿ ಶಿವತಿಕೆರೆ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸ್ಥಾನಕ್ಕೆ ಸುರೇಂದ್ರ ಶೆಟ್ಟಿ ಅವರು ರಾಜೀನಾಮೆ ನೀಡಿದ್ದಾರೆ.
ಈ ಕುರಿತು ಕರಾವಳಿನ್ಯೂಸ್ ಜತೆ ಮಾತನಾಡಿದ ಸುರೇಂದ್ರ ಶೆಟ್ಟಿಯವರು, ದೇವಸ್ಥಾನದ ಪಾವಿತ್ರ್ಯತೆ,ಹಾಗೂ ಧಾರ್ಮಿಕ ನಂಬಿಕೆ, ಪರಂಪರೆ ಉಳಿಸುವ ನಿಟ್ಟಿನಲ್ಲಿ ನಾನು ಹಾಗೂ ಆಡಳಿತ ಮಂಡಳಿಯ ಇತರೆ ಮೂವರು ಸದಸ್ಯರು ರಾಜೀನಾಮೆ ನೀಡಿದ್ದೇವೆ. ಕೆಲವೊಂದು ರಾಜಕೀಯ ಬೆಂಬಲಿತ ಸಂಘಟನೆಗಳು ದೇವಸ್ಥಾನದ ಕಟ್ಟುಕಟ್ಟಳೆಯ ವಿಚಾರದಲ್ಲಿ ಹಸ್ತಕ್ಷೇಪ ಮಾಡಿ ಗೊಂದಲ ಸೃಷ್ಟಿಸುತ್ತಿದ್ದಾರೆ,ಧಾರ್ಮಿಕತೆ ವಿಚಾರದಲ್ಲಿ ಭಕ್ತಾದಿಗಳಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎನ್ನುವ ನಿಟ್ಟಿನಲ್ಲಿ ರಾಜೀನಾಮೆ ನೀಡಿರುವುದಾಗಿ ಸುರೇಂದ್ರ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.