Share this news

ಕಾರ್ಕಳ: ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪರಿಶಿಷ್ಟ ವರ್ಗದ ಮುಖಂಡರನ್ನು ಕನಿಷ್ಠ ಸೌಜನ್ಯಕ್ಕೂ ವೇದಿಕೆಯ ಮೇಲೆ ಆಹ್ವಾನಿಸದೇ ಅಧಿಕಾರಿಗಳು ಕೇವಲ ಕಾಟಾಚಾರಕ್ಕಾಗಿ ಜಯಂತಿ ಆಚರಿಸಿದ್ದು, ಸಮಾಜ ಕಲ್ಯಾಣ ಇಲಾಖೆಯ ಈ ನಡೆಯ ವಿರುದ್ಧ ಸಮುದಾಯದವರಿಂದಲೇ ಆಕ್ರೋಶ ವ್ಯಕ್ತವಾಗಿದೆ.
ಯಾವುದೇ ಜಯಂತಿ ಆಚರಣೆ ಸಂದರ್ಭದಲ್ಲಿ ಆಯಾ ಸಮುದಾಯದ ಮುಖಂಡರುಗಳನ್ನು ವೇದಿಕೆಗೆ ಆಹ್ವಾನಿಸಿ ಕಾರ್ಯಕ್ರಮ ನಡೆಸುವುದು ಹಿಂದಿನಿಂದಲೂ ನಡೆದು‌ಬಂದ ಪರಿಪಾಠ.ಆದರೆ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಪರಿಶಿಷ್ಟ ವರ್ಗದ ಮುಖಂಡರನ್ನು ಕಡೆಗಣಿಸಲಾಗಿದೆ,ಈ ಕುರಿತು ತಹಶಿಲ್ದಾರ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರಾಘವೇಂದ್ರ ವರ್ಣೇಕರ್, ಪರಿಶಿಷ್ಟ ವರ್ಗದ ಮುಖಂಡರನ್ನು ಆಹ್ವಾನಿಸಿದರೆ ಸರ್ಕಾರದ ಶಿಷ್ಟಾಚಾರ ಉಲ್ಲಂಘನೆಯಾಗುತ್ತದೆ ಎಂದು ಪೂರ್ವಭಾವಿ ಸಭೆಯಲ್ಲಿ ತಿಳಿಸಿದ್ದರು.ಆದರೆ ಸರ್ಕಾರದ ವತಿಯಿಂದ ಆಚರಿಸಲ್ಪಡುವ ಹಲವಾರು ಜಯಂತಿಗಳ ಕಾರ್ಯಕ್ರಮದಲ್ಲಿ ಆಯಾ ಸಮುದಾಯದ ಮುಖಂಡರುಗಳನ್ನು ವೇದಿಕೆಗೆ ಆಹ್ವಾನಿಸಿದ ಸಾಕಷ್ಟು ಉದಾಹರಣೆಗಳಿವೆ. ಆದರೆ ಪರಿಶಿಷ್ಟ ವರ್ಗದವರ ಈ ಕಾರ್ಯಕ್ರಮದ ವೇದಿಕೆಯಲ್ಲಿ ಸಮುದಾಯದ ಪ್ರಾತಿನಿಧ್ಯಕ್ಕೆ ಅವಕಾಶವಿಲ್ಲ ಎಂದಾದರೆ ನಮ್ಮ ಭಾಗವಹಿಸುವಿಕೆಯ ಔಚಿತ್ಯ ಏನಿದೆ ಎಂದು ಸಮುದಾಯದ ಮುಖಂಡರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಎಲ್ಲಾ ಗಣ್ಯರು ಗೈರು!

ಕಾರ್ಕಳದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಸರ್ಕಾರಿ ಶಿಷ್ಟಾಚಾರದಂತೆ ಮುದ್ರಿಸಲಾಗಿತ್ತು, ಆದರೆ ಈ ಆಹ್ವಾನ ಪತ್ರಿಕೆಯಲ್ಲಿ ಹೆಸರುಗಳು ಇದ್ದ ಜನಪ್ರತಿನಿಧಿಯಾಗಲೀ,ಅಧಿಕಾರಿಗಳಾಗಲೀ ಒಬ್ಬರೂ ಕೂಡ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ.
ಸರ್ಕಾರದ ವತಿಯಿಂದ ನಡೆಸಲಾಗುವ ವಾಲ್ಮೀಕಿ ಜಯಂತಿಯನ್ನು ಸಮಾಜ ಕಲ್ಯಾಣ ಇಲಾಖೆ ಕೇವಲ ಕಾಟಾಚಾರಕ್ಕೆ ಕಾರ್ಯಕ್ರಮವನ್ನು ನಡೆಸಿ ಕೈ ತೊಳೆದುಕೊಂಡಿರುವುದಕ್ಕೆ ಪರಿಶಿಷ್ಟ ವರ್ಗಗಳ ಮುಖಂಡರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

 

 

 

 

 

 

 

 

Leave a Reply

Your email address will not be published. Required fields are marked *