ಕಾರ್ಕಳ : ಮಾರಿಯಮ್ಮ ಬ್ರಹ್ಮಕಲಶೋತ್ಸವಕ್ಕೆ ಬರುವ ಭಕ್ತಾದಿಗಳ ವಾಹನ ಪಾರ್ಕಿಂಗ್‌ಗಾಗಿ ಮಾರಿಗುಡಿ ದೇವಸ್ಥಾನದ ಹಿಂಭಾಗದಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
10 ಎಕರೆ ವಿಶಾಲವಾದ ಪ್ರದೇಶದಲ್ಲಿ ಸುಮಾರು 5 ಸಾವಿರ ಕಾರು ಹಾಗೂ 3 ಸಾವಿರ ಬೈಕ್ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಲಾಗಿದ್ದು, ಭಕ್ತಾದಿಗಳು ದೇವಸ್ಥಾನದ ಪಕ್ಕದಲ್ಲೇ ವಾಹನಗಳನ್ನು ನಿಲ್ಲಿಸಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದಾಗಿದೆ. ವಾಹನಗಳ ಸಂಚಾರದಲ್ಲಿ ಯಾವುದೇ ತೊಂದರೆಯಾಗದೆ ಸುಲಲಿತ ಸಂಚಾರದ ನಿಟ್ಟಿನಲ್ಲಿ ವಾಹನ ಸಂಚಾರ ಮಾರ್ಗವನ್ನು ಸೂಚಿಸಲಾಗಿದೆ.

ಹೊಸ್ಮಾರು, ನಾರಾವಿ, ಬಜಗೋಳಿ ಕಡೆಯಿಂದ ಬರುವ ಭಕ್ತಾದಿಗಳು ಬೈಪಾಸ್, ಅನೆಕೆರೆ ಮಾರ್ಗವಾಗಿ ಟಾಟಾ ಗ್ಯಾರೇಜ್ ನಿಂದ ಕೋಟೆಕಣಿ ಪಾರ್ಕಿಂಗ್ ಸ್ಥಳಕ್ಕೆ ಬರಬೇಕು.
ಬೈಲೂರು, ಅಜೆಕಾರು ಕಡೆಯಿಂದ ಬರುವವರು ಜೋಡುರಸ್ತೆ, ಮೂರುಮಾರ್ಗವಾಗಿ ಟಾಟಾ ಗ್ಯಾರೇಜ್ ಮೂಲಕ ಪಾರ್ಕಿಂಗ್ ಸ್ಥಳ ತಲುಪಬಹುದು. ತೆಳ್ಳಾರು, ಅನಂತಶಯನ ಮಾರ್ಗವಾಗಿ ಬರುವವರು ಬಂಟ್ಸ್ ಹಾಸ್ಟೆಲ್ ಮತ್ತು ಕಟೀಲ್ ಹೋಟೆಲ್ ಹತ್ತಿರದ ಪಾರ್ಕಿಂಗ್ ಉಪಯೋಗಿಸುವಂತೆ ವಿನಂತಿಸಲಾಗಿದೆ.

ದೇವಸ್ಥಾನದಿಂದ ನಿರ್ಗಮಿಸುವವರು ಬಜಗೋಳಿ ಕಡೆಗೆ ಹೋಗುವವರು ಅಮರಜ್ಯೋತಿ ಆಸ್ಪತ್ರೆಯಾಗಿ ದಾನಶಾಲೆ ಗೊಮ್ಮಟೇಶ್ವರ ಬೆಟ್ಟವಾಗಿ ತೆರಳುವುದು. ಮೂಡಬಿದಿರೆ, ಬೆಳ್ಮಣ್, ಬೈಲೂರು ಮತ್ತು ಅಜೆಕಾರು,ಹೆಬ್ರಿಗೆ ತೆರಳುವವರು ಅಮರಜ್ಯೋತಿ ಅನೆಕೆರೆ ಸರ್ಕಲ್ ಮೂಲಕ ಬೈಪಾಸ್ ಹೈವೇಯಲ್ಲಿ ತೆರಳಿ ಸುಗಮ ವಾಹನ ಸಂಚಾರಕ್ಕೆ ಸಹಕಾರ ನೀಡಬೇಕೆಂದು ಬ್ರಹ್ಮಕಲಶೋತ್ಸವದ ಪಾರ್ಕಿಂಗ್ ಸಮಿತಿಯ ಸುಮಿತ್ ನಲ್ಲೂರು, ಪ್ರಾಣೇಶ್ ಪರಪು, ಸಂಚಾಲಕರು ಹಾಗು ಸರ್ವಸದ್ಯಸರು ಈ ಮೂಲಕ ವಿನಂತಿಸಿದ್ದಾರೆ.

