ಕಾರ್ಕಳ : ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ಸೋಮವಾರ (ಇಂದು) ಕಾರ್ಕಳ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ವೈದ್ಯಾಧಿಕಾರಿ ಕೆ. ಎಸ್ ರಾವ್ ಅವರಲ್ಲಿ ಸಮಾಲೋಚನೆ ನಡೆಸಿ ಮಾಹಿತಿ ಪಡೆದು ಆಸ್ಪತ್ರೆಯಲ್ಲಿರುವ ಎಲ್ಲಾ ಖಾಲಿ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡುವಲ್ಲಿ ಪ್ರಯತ್ನಿಸುದಾಗಿ ಭರವಸೆ ನೀಡಿದರು.

ಪ್ರಮುಖವಾಗಿ ಹಿರಿಯ ಪ್ರಸೂತಿ ತಜ್ಞರ ಹುದ್ದೆ ಖಾಲಿ ಇರುವುದರಿಂದ ನಮ್ಮೂರಿನ ಮಹಿಳೆಯರು ಹೆರಿಗೆಗಾಗಿ ದೂರದ ಊರನ್ನು ಅವಲಂಬಿಸಬೇಕಾಗಿದೆ ಹಾಗಾಗಿ ಈ ಹುದ್ದೆಯ ನೇಮಕಾತಿ ಅತೀ ಶೀಘ್ರದಲ್ಲಿ ಆಗಬೇಕಿದೆ.ಅಲ್ಲದೆ ಇತರ ಕೆಲವು ಹುದ್ದೆಗಳು ಖಾಲಿ ಇರುವುದರಿಂದ ಸಾರ್ವಜನಿಕರಿಗೆ ಸೂಕ್ತ ಸಮಯಕ್ಕೆ ಸೇವೆ ನೀಡುವಲ್ಲಿ ವಿಳಂಬವಾಗುತ್ತದೆ. ಮಕ್ಕಳ ಪೌಷ್ಟಿಕಾಂಶ ಪುನರ್ವಸತಿ ಕೇಂದ್ರ ಮತ್ತು ಡಯಾಲಿಸಿಸ್ ಕೇಂದ್ರದಲ್ಲಿ ವೈದ್ಯರ ಮತ್ತು ಸಿಬಂದಿಗಳ ಅಗತ್ಯವಿದೆ. ಈ ಕುರಿತು ಆರೋಗ್ಯ ಸಚಿವರಲ್ಲಿ ಮನವಿ ಮಾಡಿ ಕ್ರಮ ಕೈಗೊಳ್ಳಲು ಪ್ರಯತ್ನಿಸುವುದಾಗಿ ತಿಳಿಸಿದರು.

ಎಲ್ಲಾ ಸಿಬ್ಬಂದಿಗಳು ಸೇವಾ ಮನೋಬಾವನೆಯಿಂದ ಕರ್ತವ್ಯ ನಿರ್ವಹಿಸಬೇಕು. ನಿಮ್ಮ ಮೇಲೆ ನಂಬಿಕೆ ಇಟ್ಟು ಬರುವ ಪ್ರತಿಯೊಬ್ಬ ಅನಾರೋಗ್ಯ ಪೀಡಿತರಿಗೂ ಉತ್ತಮ ಸೇವೆ ನೀಡಬೇಕೆಂದು ಮನವಿ ಮಾಡಿದರು. ಕರ್ತವ್ಯ ನಿರ್ವಹಿಸುವ ಸಂದರ್ಬದಲ್ಲಿ ನಿಮಗೆ ಸಮಸ್ಯೆಯಾದರೆ ನನನ್ನು ಸಂಪರ್ಕಿಸಿ ಸದಾ ನಿಮ್ಮ ಜೊತೆ ನಾನಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಸಹಾಯಕ ಆಡಳಿತ ವೈದ್ಯಾಧಿಕಾರಿ ಭಾರತಿ, ಆಸ್ಪತ್ರೆಯ ಇತರ ವೈದ್ಯಾದಿಕಾರಿಗಳು, ಶುಶ್ರೂಷಕ ಅಧೀಕ್ಷಕರು, ಸಿಬ್ಬಂದಿಗಳು, ಪುರಸಭಾ ಸದಸ್ಯರುಗಳು ಉಪಸ್ಥಿತರಿದ್ದರು.

