ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತಿರುವ ಪಕ್ಷದ ಮೂಲ ಕಾರ್ಯಕರ್ತರಿಗೆ ಹಾಗೂ ಹಿಂದುತ್ವವನ್ನು ಕಡೆಗಣಿಸಲಾಗುತ್ತಿದೆ ಎಂದು ಬಿಜೆಪಿ ಉಚ್ಛಾಟಿತ ಕಾರ್ಯಕರ್ತ ಸುಭಾಷ್ ಚಂದ್ರ ಹೆಗ್ಡೆ ಆರೋಪಿಸಿದ್ದಾರೆ.
ಈ ಹಿಂದೆ ಇಂಧನ ಸಚಿವರಾಗಿದ್ದ ಹಾಗೂ ಹಾಲಿ ಶಾಸಕರು ಹಿಂದೂ ಹಿಂದೂ ವಿರೋಧಿ ಕೃತ್ಯಗಳು ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವ ಕಾರಣದಿಂದ ಪ್ರಖರ ಹಿಂದೂ ರಾಷ್ಟ್ರೀಯವಾದಿಯ ಪರವಾಗಿ ಪ್ರಚಾರ ಕೆಲಸ ಮಾಡಿದ್ದೇನೆಯೇ ಹೊರತು ಬಿಜೆಪಿ ಪಕ್ಷದ ವಿರುದ್ಧ ಎಂದೂ ಕೆಲಸ ಮಾಡಿಲ್ಲವೆಂದು ಸುಭಾಸ್ ಚಂದ್ರ ಹೆಗ್ಡೆ ಸ್ಪಷ್ಟಪಡಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಹಿಂದೂ ಹೋರಾಟವನ್ನು ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ದಬ್ಬಾಳಿಕೆ ನಡೆಸುತ್ತಿರುವ ವಿಚಾರದ ಕುರಿತು ನನ್ನ ಹೋರಾಟವಿತ್ತೇ ಹೊರತು ನಾನು ಬಿಜೆಪಿ ವಿರುದ್ಧ ಎಂದೂ ಪ್ರಚಾರ ಮಾಡಿರಲಿಲ್ಲ. ಹಿಂದುತ್ವವೇ ನನ್ನ ಉಸಿರಾಗಿದ್ದು ನನ್ನ ಮೊತ್ತ ಮೊದಲ ಆದ್ಯತೆ ಹಿಂದುತ್ವವೇ ಆಗಿದೆ ಆದ್ದರಿಂದ ವ್ಯಕ್ತಿಗಿಂತ ದೇಶ ಮೊದಲು ಎನ್ನುವ ಸಿದ್ಧಾಂತದಡಿ ನಿಟ್ಟೆ ಗ್ರಾಮ ಪಂಚಾಯತ್ ಸದಸ್ಯನಾಗಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿಕೊಂಡು ಬಂದಿದ್ದೇನೆ ಎಂದು ಸುಭಾಷ್ ಚಂದ್ರ ಹೆಗ್ಡೆ ಹೇಳಿದ್ದಾರೆ







