ಕಾರ್ಕಳ: ಕಾರ್ಕಳ ಹೆಬ್ರಿ ತಾಲೂಕು ಮರಾಠಿ ಸಮಾಜ ಸೇವಾ ಸಂಘ (ರಿ) ಕಾರ್ಕಳ ಇದರ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆಯು ಸಂಘದ ಅಧ್ಯಕ್ಷರಾದ ಶಂಕರ ನಾಯ್ಕ್ ದುರ್ಗ ಇವರ ಅಧ್ಯಕ್ಷತೆಯಲ್ಲಿ ಕಾರ್ಕಳ ಲ್ಯಾಂಪ್ಸ್ ಸೊಸೈಟಿ ಸಭಾಂಗಣದಲ್ಲಿ ನಡೆಯಿತು.
2023-25ನೇ ಸಾಲಿಗೆ ಅಧ್ಯಕ್ಷರಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯೋಗ ಶಿಕ್ಷಕ ಶೇಖರ್ ಕಡ್ತಲ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಕುರ್ಪಾಡಿ ಸುಧಾಕರ ನಾಯ್ಕ್, ಉಪಾಧ್ಯಕ್ಷರಾಗಿ ವಿ ಸುಧಾಕರ ನಾಯ್ಕ್ ಬಂಗ್ಲೆಗುಡ್ಡೆ, ಸುಗಂಧಿ ನಾಯ್ಕ್ ಶಿವಪುರ, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಇರ್ವತ್ತೂರು, ಜತೆ ಕಾರ್ಯದರ್ಶಿಯಾಗಿ ಅಶೋಕ್ ನಾಯ್ಕ್ ದುರ್ಗಾ, ಕೋಶಾಧಿಕಾರಿಯಾಗಿ ಕೆ ಶ್ರೀನಿವಾಸ ನಾಯ್ಕ್ ನಕ್ರೆ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪವನ್ ದುರ್ಗ, ಸಂಘಟನಾ ಕಾರ್ಯದರ್ಶಿಯಾಗಿ ಅಶೋಕ್ ನಾಯ್ಕ್ ಕುಕ್ಕುಜೆ, ಲೆಕ್ಕಪರಿಶೋಧಕರಾಗಿ ಗೋಪಾಲ್ ನಾಯ್ಕ್ ಮುಡಾರು,ಯುವ ವೇದಿಕೆ ಅಧ್ಯಕ್ಷರಾಗಿ ನಾಗೇಂದ್ರ ನಾಯ್ಕ್ ಚಾರ, ಮಹಿಳಾ ವೇದಿಕೆ ಅಧ್ಯಕ್ಷರಾಗಿ ಪ್ರಮೀಳಾ ಪಾಲ್ಜಡ್ಡು, ಹಾಗೂ 18 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.