Share this news

ಕಾರ್ಕಳ: ದೇವರ ಮೇಲೆ ಅಪಾರ ನಂಬಿಕೆ, ಹಿಡಿದ ಕೆಲಸದಲ್ಲಿ ಶ್ರದ್ಧೆ ಹಾಗೂ ನಿರಂತರ ಪ್ರಯತ್ನಗಳು ನಾವು ಸಾಧಿಸಬೇಕಾದ ಗುರಿಗಳ ಮೂರು ಮೆಟ್ಟಿಲುಗಳು ಎಂದು ಕಾರ್ಕಳ ಕ್ರೈಸ್ಟ್ ಕಿಂಗ್ ಚರ್ಚ್ ಧರ್ಮಗುರುಗಳಾದ ಕ್ಲೆಮೆಂಟ್ ಮಸ್ಕರೇನಸ್ ಹೇಳಿದರು.
ಅವರು ಭಾನುವಾರ ಕೊಂಕಣ್ ಅಸೋಸಿಯೇಟ್ಸ್ ಹಾಗೂ ಧರ್ಮ ಅಸೋಸಿಯೇಟ್ಸ್ ಸಹಭಾಗಿತ್ವದಲ್ಲಿ ಕಾರ್ಕಳ ಮಾರಿಯಮ್ಮ ದೇವಸ್ಥಾನದ ಬಳಿ ನೂತನವಾಗಿ ನಿರ್ಮಾಣಗೊಳ್ಳಲಿರುವ ವಾಣಿಜ್ಯ ಹಾಗೂ ವಸತಿ ಸಮ್ಮುಚ್ಚಯ ಹೆರಿಟೇಜ್ ಹೈಟ್ಸ್ ಇದರ ಶಿಲಾನ್ಯಾಸ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇವನೊಬ್ಬ ನಾಮ‌ ಹಲವು ಎನ್ನುವಂತೆ ಹೆರಿಟೇಜ್ ಹೈಟ್ಸ್ ಕಟ್ಟಡದಲ್ಲಿ ಎಲ್ಲಾ ಜಾತಿಧರ್ಮದವರು ಪರಸ್ಪರ ಸೌಹಾರ್ದತೆ ಮೆರೆಯುವ ಮೂಲಕ ಈ ಉದ್ಯಮ ಉತ್ತುಂಗಕ್ಕೇರಲಿ ಎಂದು ಶುಭಹಾರೈಸಿದರು.
ಕಾರ್ಕಳ ಮಾರಿಯಮ್ಮ ದೇವಸ್ಥಾನದ ಪ್ರಧಾನ ಅರ್ಚಕ ರಘುರಾಮ ಆಚಾರ್ ಶಿಲಾನ್ಯಾಸ ಸಮಾರಂಭವನ್ನು ಉದ್ಘಾಟಿಸಿ,ನೂತನ ವಾಣಿಜ್ಯ ಹಾಗೂ ವಸತಿ ಸಮುಚ್ಚಯದ ಕಟ್ಟಡಕ್ಕೆ ಶುಭಕೋರಿದರು. ಬಂಗ್ಲೆಗುಡ್ಡೆ ತಯ್ಯಬಾ ಗಾರ್ಡನ್ ಕಾಲೇಜು ಪ್ರಾಂಶುಪಾಲ ಅಹಮದ್ ಶರೀಫ್ ಸ ಅದಿ ಕಿಲೂರು ಮಾತನಾಡಿ, ಹೆರಿಟೇಜ್ ಹೈಟ್ಸ್ ಹೆಸರೇ ಸೂಚಿಸುವಂತೆ ಎತ್ತರಕ್ಕೆ ಏರಿ ಅಭಿವೃದ್ದಿಪಥದತ್ತ ಸಾಗಲಿ ಎಂದು ಶುಭಹಾರೈಸಿದರು.
ಪುರಸಭಾ ಮುಖ್ಯಾಧಿಕಾರಿ ರೂಪಾ.ಟಿ ಶೆಟ್ಟಿ ಅವರು ಹೆರಿಟೇಜ್ ಹೈಟ್ಸ್ ಸಮುಚ್ಚಯದ ವೆಬ್ ಸೈಟ್ ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು,ಪಟ್ಟಣಗಳು ಅಭಿವೃದ್ದಿ ಹೊಂದಬೇಕಾದರೆ ಉದ್ಯಮಗಳು ಬೆಳೆಯಬೇಕು, ಈ ನಿಟ್ಟಿನಲ್ಲಿ ಕೊಂಕಣ್ ಹಾಗೂ ಧರ್ಮ ಅಸೋಸಿಯೇಟ್ಸ್ ಅವರ ಉದ್ಯಮವು ಕಾರ್ಕಳದ ಸಮಗ್ರ ಅಭಿವೃದ್ದಿಗೆ ಸಹಕಾರಿಯಾಗಲಿದೆ ಎಂದರು.
ಪುರಸಭಾ ಮಾಜಿ ಅಧ್ಯಕ್ಷೆ ಸುಮಾ ಕೇಶವ ಉಪಸ್ಥಿತರಿದ್ದರು.
ಪಾಲುದಾರರಾದ ಲಿಯೋ ಪಿರೇರಾ, ವಾಲ್ಟರ್, ಫೆಡ್ರಿಕ್, ಕ್ಲಿಫರ್ಡ್, ವಿಲ್ಸನ್, ಸಂತೋಷ್ ಅತಿಥಿಗಳನ್ನು ಗೌರವಿಸಿದರು‌

ಸಂತೋಷ್ ಡಿಸಿಲ್ವ ಸ್ವಾಗತಿಸಿ,ಲಾಯ್ಡ್ ಡೊಮಿನಿಕ್ ವಂದಿಸಿದರು.ಆಶಿಶ್ ಶೆಟ್ಟಿ ಕಾರ್ಯಕ್ರಮ‌ ನಿರೂಪಿಸಿದರು.
ಒಟ್ಟು 7 ಮಹಡಿಗಳ ಹೆರಿಟೇಜ್ ಹೈಟ್ಸ್ ಕಟ್ಟಡದಲ್ಲಿ 64 ವಾಣಿಜ್ಯ ಮಳಿಗೆಗಳು ಹಾಗೂ 50 ವಸತಿ ಸಮುಚ್ಚಯಗಳಿದ್ದು, ಏಕಕಾಲದಲ್ಲಿ 120 ಕಾರು ಪಾರ್ಕಿಂಗ್, 24 ಗಂಟೆ ನೀರು ಹಾಗೂ ವಿದ್ಯುತ್ ಸೌಲಭ್ಯಗಳು ಒಳಗೊಂಡಿವೆ ಎಂದು ಪ್ರವರ್ತಕರು ಹೇಳಿದ್ದಾರೆ.

 

Leave a Reply

Your email address will not be published. Required fields are marked *