Share this news

ಮುಲ್ಕಿ: ಅನಾರೋಗ್ಯ ಪೀಡಿತರಿಗೆ ಅಶಕ್ತರಿಗೆ ಸಹಾಯ ಮಾಡುವ ಕಾರ್ಯ ಶ್ಲಾಘನೀಯ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಎನ್.ವಿನಯ ಹೆಗ್ಡೆ ಹೇಳಿದರು.

ಅವರು ಕಾರ್ನಾಡ್ ನ ಪೂಂಜಾ ನಿವಾಸದಲ್ಲಿ ನಡೆದ ಗ್ರಾಮೀಣ ಪ್ರದೇಶದ ಶಿಕ್ಷಣ ಹರಿಕಾರ ದಿ.ರಾಮಕೃಷ್ಣ ಪೂಂಜ ಟ್ರಸ್ಟ್ ವತಿಯಿಂದ ಶ್ರೀಮತಿ ಸರಸ್ವತಿ ಪೂಂಜಾ ಸ್ಮರಣಾರ್ಥ, ಭಾಸ್ಕರ ಪೂಂಜ ರವರ ಸಹಭಾಗಿತ್ವದಲ್ಲಿ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಅರವಿಂದ ಪೂಂಜಾ ರವರ ನೇತೃತ್ವದಲ್ಲಿ ಸುಮಾರು 20 ಲಕ್ಷ ವೆಚ್ಚದಲ್ಲಿ ವಿದ್ಯಾರ್ಥಿ ವೇತನ, ವೈದ್ಯಕೀಯ ಚಿಕಿತ್ಸೆಗೆ ಧನ ಸಹಾಯ, ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಇತರ ಸೌಲಭ್ಯ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಎಂ ಎಚ್ ಅರವಿಂದ ಪೂಂಜ ವಹಿಸಿ ಮಾತನಾಡಿ ಕಳೆದ 46 ವರ್ಷಗಳಿಂದ ನಿರಂತರ ಸಹಾಯ ಹಸ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.


ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಟ್ರಸ್ಟ್ ನ ಆದಿತ್ಯ ಪೂಂಜ,ಅಶ್ವಿನಿ ಪೂಂಜ, ಮುಲ್ಕಿ ನ. ಪಂ. ಸದಸ್ಯ ಹರ್ಷರಾಜ ಶೆಟ್ಟಿ, ಟ್ರಸ್ಟ್ ಸದಸ್ಯರಾದ ವೈ.ಎನ್.ಸಾಲ್ಯಾನ್, ಸರ್ವೋತ್ತಮ ಅಂಚನ್, ಶರತ್ ಶೆಟ್ಟಿ, ಸಂಕಲ ಕರಿಯ,ಚಂದ್ರಹಾಸ ಶೆಟ್ಟಿ ಪಡುಪಣಂಬೂರು ಗ್ರಾಪಂ ಮಾಜೀ ಅಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು ,ಸತ್ಯ ಶಂಕರ ಶೆಟ್ಟಿ ಸಚ್ಚರಿಪೇಟೆ,ತೋಕೂರು ಐಟಿಐ ಪ್ರಾಂಶುಪಾಲ ಹರಿ ಎಚ್ ಮತ್ತಿತರರು ಉಪಸ್ಥಿತರಿದ್ದರು.
ಇತ್ತೀಚೆಗೆ ನಿಧನರಾದ ಟ್ರಸ್ಟ್ ನ ಸದಸ್ಯರಾದ ಸುಂದರ ಶೆಟ್ಟಿ ರವರಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು

Leave a Reply

Your email address will not be published. Required fields are marked *