ಮೂಲ್ಕಿ: :ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡದ ಮತ್ತು ಸಾಹಿತ್ಯದ ಕೆಲಸಗಳು ನಡೆಯುತ್ತಲೇ ಇರುತ್ತವೆ. ಆ ಮೂಲಕ ಕನ್ನಡದ ಮನಸ್ಸು ಕ್ರಿಯಾಶೀಲವಾಗಿತ್ತದೆ ಎಂದು ಮೂಡುಬಿದ್ರೆ ಡಾ. ಮೋಹನ ಆಳ್ವ ಹೇಳಿದರು.
ಅವರು ಶುಕ್ರವಾರ ಕಿನ್ನಿಗೋಳಿ ಅನಂತ ಪ್ರಕಾಶದ ಗಾಯತ್ರೀ ಪ್ರಕಾಶನದಿಂದ ಪ್ರಕಟಿತ 169ನೇ ಕೃತಿ ರಾಧಾಕೃಷ್ಣ ಕಲ್ಚಾರ್ ಅವರ ಲೇಖನಗಳ ಕೃತಿ ತಲ್ಲಣಿಸದಿರು ಮನವೆ, 170ನೆಯ ಕೃತಿ ಕಲ್ಚಾರ್ ಅವರ ಕಾದಂಬರಿ ಕೂಡುಮನೆ ಹಾಗೂ 171ನೆಯ ಕೃತಿ ಟಿ.ಎಂ. ರಮೇಶ್ ಅವರ ಲಲಿತಪ್ರಬಂಧಗಳ ಸಂಕಲನ ನಗುಬಿಗು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಡಾ. ಭಾಸ್ಕರನಾಂದ ಕುಮಾರ್ ಮಾತನಾಡಿ ಸಾಹಿತ್ಯದ ಬರವಣಿಗೆ, ಓದು ಹಾಗೂ ಕೇಳುವಿಕೆಗಳು ಮನಸ್ಸಿನ ಆನಂದವನ್ನು ಹೆಚ್ಚಿಸುತ್ತವೆ, ಕಿನ್ನಿಗೋಳಿಯ ಅನಂತ ಪ್ರಕಾಶ ಸಂಸ್ಥೆ ನಡೆಸಿಕೊಂಡು ಬರುತ್ತಿರುವ ಸಾಹಿತ್ಯ ಚಟುವಟಿಕೆಗಳು ಅಭಿನಂದನೀಯ. ಕಲ್ಚಾರ್ ಅವರ ಕೃತಿಯ ಓದು ಪುರಾಣದ ಜ್ಞಾನದಾಹಿಗೆ ಉತ್ತಮ ಕೃತಿ ಎಂದರು.
ಉಡುಪಿಯ ಮುರಳಿ ಕಡೆಕಾರ್ ಮಾತನಾಡಿ, ತಾಳಮದ್ದಲೆ ಕ್ಷೇತ್ರದಲ್ಲಿ ಹೆಸರು ಮಾಡಿರುವ ಕಲ್ಚಾರ್ ಅವರ ಕಾದಂಬರಿ ಕೂಡುಮನೆ ಸರಾಗ ಓದಿಸಿಕೊಂಡು ಹೋಗುವ ಉತ್ತಮ ಕೃತಿ. ಹಿಂದಿನ ಕೂಡುಕುಟುಂಬದ ಬಾಂಧವ್ಯದ ಸೊಗಸು ಇಂದಿಲ್ಲ. ಸ್ವಾರ್ಥದ ಬದುಕಿನ ಮನಸ್ಥಿತಿಯಿಂದಾಗಿ ಮನೆಗಳು ಒಡೆದುಹೋಗುತ್ತಿವೆ ಎಂದರು.
ಅನAತ ಪ್ರಕಾಶ ಸಂಸ್ಥೆಯ ಕೊಡೆತ್ತೂರು ಸಚ್ಚಿದಾನಂದ ಉಡುಪ, ಕೃತಿಕಾರ ರಾಧಾಕೃಷ್ಣ ಕಲ್ಚಾರ್ ಕೊಡೆತ್ತೂರು ವೇದವ್ಯಾಸ ಉಡುಪ ಪ್ರಕಾಶ್ ಆಚಾರ್ ಉಪಸ್ಥಿತರಿದ್ದರು.